Saturday, December 14, 2013

ಕತ್ತಲೆಂಬ ಭ್ರಮೆಯಲ್ಲಿ ಬೆಳಕಿನ ಹುಡುಕಾಟ...

ಜೀವನಾ ಹೇಗಿದೆ ಎಂಬ ಪ್ರಶ್ನೆಗೆ ಎಷ್ಟೋ ಸಲ ಬರುವ ಉತ್ತರ ಬೋರಿಂಗ್ ಎಂದು.. ಕಾರಣವೇನೆಂದು ಯಾರಿಗೂ ತಿಳಿದಿಲ್ಲ..ನಮಗೆ ನಾವೇ ಬೋರ್ ಆಗಿಬಿಟ್ಟಿದ್ದೇವಾ? ನಮ್ಮೊಳಗಿನ ಕನಸುಗಳು, ನಾಳಿನ ಭರವಸೆಗಳು, ಏನನ್ನಾದರೂ ಸಾಧಿಸಲೇಬೇಂಬ ಛಲವೆಲ್ಲ ಏನಾಯಿತು..ಅಯ್ಯೋ ಲೈಫ್ ತುಂಬಾ ಬೋರು ಎಂಬ ಮಾತಿಗಿಳಿಯುವ  ಮೊದಲು ಯಾಕೆ ಬೋರ್ ಆಗ್ತಾ ಇದೆ..ಎಲ್ಲವೂ ನಮ್ಮಿಷ್ಟದಂತೆಯೇ ನಡೆಯುತ್ತಿದೆ ಆದರೂ ಬೋರಿಂಗ್ ಎಂದರೆ  ಕಾರಣ ಇದಕ್ಕೆ ನಾವೇ ಹೊರತು ಬೇರೆಯವರ್ಯಾರೂ ಪರಿಹಾರ ಕೊಡಲು ಸಾಧ್ಯವಿಲ್ಲ..ಜಗತ್ತಿನಲ್ಲಿರುವ ಜನರೆಲ್ಲ ಸಲಹೆಗಳನ್ನು ಕೊಡಬಲ್ಲರು ಆದರೆ ನಮ್ಮ ಮನಸ್ಸಿಗೆ ಅರ್ಥಮಾಡಿಸಿಕೊಳ್ಳುವವರು ನಾವೊಬ್ಬರೇ.. ಬದುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಾವೇ ಆಗಿರುತ್ತೇವೆ..

ಅವರೇ ಆಯ್ದುಕೊಂಡ ಅವರಿಷ್ಟದ ಸಬ್ಜೆಕ್ಟ್ , ಇಂತಹ ವೃತ್ತಿಗೇ ಹೋಗಬೇಕೆಂದು ಅವರಿಷ್ಟದ ಕೆಲಸವನ್ನೇ ಆಯ್ದುಕೊಂಡಿರುತ್ತಾರೆ..ಹುಚ್ಚುಕೋಡಿ ಮನಸಿಗೆ ಕಡಿವಾಣ ಹಾಕಿಕೊಳ್ಳಬೇಕಾದ ಅವಶ್ಯಕತೆ ಇದೆಯೋ, ಅಥವಾ ಅನಿವಾರ್ಯತೆ ಇದೆಯೋ ಗೊತ್ತಿಲ್ಲ.. ಆದರೆ ಜೀವನದ ಪ್ರತೀಯೊಂದು ಕೆಲಸದಲ್ಲೂ, ಪ್ರತೀಯೊಂದು ಕ್ಷಣದಲ್ಲೂ ಖುಷಿಯಾಗಿರಬೇಕೆಂಬುದು ಎಲ್ಲರ ಹಂಬಲ..ಯಾರಾದರೂ ಪ್ರೀತಿಯಿಂದ ಮಾತನಾಡಿಸಿದಾಗ ಎಲ್ಲೋ ಒಂದು ಕಡೆ ಸಂತಸವೆಂಬ ಬೆಳಕಿನ ಕಿರಣವು ಹರಿಯುತ್ತದೆ.. 

ಪ್ರತೀ ಕತ್ತಲೂ ಸೂರ್ಯೋದಯಕ್ಕಾಗಿ ಕಾಯುತ್ತಿರುತ್ತದೆ. ಬದುಕಿನ ಪ್ರತೀಯೊಂದು ತಿರುವಿನಲ್ಲೂ ಒಂದೊಂದು ಕಾಲುದಾರಿಯನ್ನಾದರೂ ಹುಡುಕುತ್ತ ಸಾಗಲೇಬೇಕು. ಇಷ್ಟವೋ, ಕಷ್ಟವೋ, ಅನಿವಾರ್ಯವೋ ಆಯ್ದುಕೊಂಡಿರುವ ಕೆಲಸವನ್ನು ಪ್ರೀತಿಯಿಂದ ಮಾಡಲೇಬೇಕಲ್ಲವೇ? ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದಕ್ಕಿಂತ, ಕಾಲು ಚಾಚುವಷ್ಟು ಉದ್ದದ ಹಾಸಿಗೆಯನ್ನೇ ಮಾಡಿಕೊಳ್ಳುವೆ ಎಂಬುವುದು ಜಾಣತನ.

ಎಲ್ಲವೂ ಮನಸ್ಸಿಗೆ ಸಂಬಂಧಿಸಿದ್ದು.. ಪ್ರಾನ್ಸ್ ನಲ್ಲೊಬ್ಬ ಮನೋವಿಜ್ಷಾನಿ ಇಮಾಯಿಲ್ ಕುವೇ ಎಂಬುವವನು ರೋಗಿಗಳಿಗೆ ಸಕಾರಾತ್ಮಕ ಮನೋಭಾವವನ್ನು ತುಂಬಿಸಿ ಲಕ್ಷಾಂತರ ಜನರನ್ನು ಗುಣಪಡಿಸಿದ್ದನಂತೆ.. ''ನಾನು ಆರೋಗ್ಯವಾಗಿರುವೆ. ನನ್ನ ಆರೋಗ್ಯ ಸುಧಾರಿಸುತ್ತದೆ, ಎಂದು ಮನಸ್ಸಿಗೆ ಮತ್ತೆ ಮತ್ತೆ ಹೇಳಿಕೊಳ್ಳಬೇಕೆಂದು , ಪ್ರತೀದಿನ ರಾತ್ರಿ ಮಲಗುವ ಮುಂಚೆ ಅದೇ ಯೋಚನೆಯಲ್ಲಿ ಮಲಗಬೇಕು" ಎಂದು ಹೇಳುತ್ತಿದ್ದನಂತೆ..ಇಂತಹ ಸಕಾರಾತ್ಮಕ ಮನಸ್ಸಿನ ಸ್ಥಿತಿಯು ಮತ್ತಷ್ಟು ವರುಷಗಳು ಸಂತಸವನ್ನು ತಂದುಕೊಡಬಲ್ಲುದು..

ಪ್ರತೀ ಬೋರಿಂಗ್ ಎಂಬ ಹೇಳಿಕೆಯ ಸುತ್ತಲೇ ಎಂಜಾಯ್ ಎಂಬ ಪದವು ಸುತ್ತುತ್ತಿರುತ್ತೆ.. ಆದರೆ ನಮ್ಮ ಭಾವನೆಗಳು ಮಾತ್ರ ಯಾವುದೋ ಒಂದಕ್ಕೆ ಅಂಟಿಕೊಂಡು ಒದ್ದಾಡುತ್ತಿರುತ್ತದೆ..ಖುಷಿಯ ಚಿಲುಮೆಯನು, ಸಕಾರಾತ್ಮಕವಾದ ಭಾವಗಳನ್ನು ನಮಗೆ ನಾವೇ ಸೃಷ್ಟಿಸಿಕೊಳ್ಳಬೇಕು..

11 comments:

 1. ಹಾಯ್
  ಪದ್ಮಾಜಿ `ಕತ್ತಲೆಂಬ ಭ್ರಮೆಯಲ್ಲಿ ಬೆಳಕಿನ ಹುಡುಕಾಟ... ``
  ಚೆಂದದ ಲೇಖನ.!!

  ReplyDelete
 2. ಪದ್ಮಾ -
  ಇಷ್ಟವಾಯಿತು ಬರಹ...
  ಜಗತ್ತಿನಲ್ಲಿರುವ ಜನರೆಲ್ಲ ಸಲಹೆಗಳನ್ನು ಕೊಡಬಲ್ಲರು ಆದರೆ ನಮ್ಮ ಮನಸ್ಸಿಗೆ ಅರ್ಥಮಾಡಿಸಿಕೊಳ್ಳುವವರು ನಾವೊಬ್ಬರೇ.. ಬದುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಾವೇ ಆಗಿರುತ್ತೇವೆ..
  ಬದುಕಿನ ಪ್ರತೀಯೊಂದು ತಿರುವಿನಲ್ಲೂ ಒಂದೊಂದು ಕಾಲುದಾರಿಯನ್ನಾದರೂ ಹುಡುಕುತ್ತ ಸಾಗಲೇಬೇಕು...
  ಬದುಕಿನ ಪ್ರತೀಯೊಂದು ತಿರುವಿನಲ್ಲೂ ಒಂದೊಂದು ಕಾಲುದಾರಿಯನ್ನಾದರೂ ಹುಡುಕುತ್ತ ಸಾಗಲೇಬೇಕು..
  ಚಂದದ ಸಾಲುಗಳು...:)

  ReplyDelete
 3. ನಮ್ಮ ಎಷ್ಟೋ ಭಾವನೆಗಳು ನಮ್ಮ ಬದುಕಿನ ರೀತಿಯನ್ನು ಅವಲಂಬಿಸಿರುತ್ತವೆ....
  ಬೋರಿಂಗ್ ಅನ್ನಲು ಕಾರಣ ನಮ್ಮಲ್ಲಿನ ಅದೇ ಅದೇ ರುಟೀನ್ ಗಳು.....
  ತೀರಾ ಸಂತೋಷವಾಗಿರುವವರು.... ಯಾವುದೇ ಸಮಸ್ಯೆಗಳಿರದೇ ಹಾಯಾಗಿ ಬದುಕುತ್ತಿರುವವರು ಕೂಡಾ
  ಬದುಕು ಬೋರಾಗಿ ಬಿಟ್ಟಿದೆ ಅಂತಾರೆ.... ಬದುಕಿನಲ್ಲಿ ಬದಲಾವಣೆ ಬೇಕು ಮತ್ತು ಅದು ಸಕಾರಾತ್ಮಕವಾಗಿರಬೇಕು....

  ಪದ್ಮಾ......ಚಂದದ ಬರಹ......

  ReplyDelete
 4. ಚೆಂದ ಇದ್ದು ಪದ್ದು...ಕೆಲವೊಮ್ಮೆ ಬಹಳ ಖುಷಿ ನೀಡಿದ ವಿಷಯಗಳು ಇಲ್ಲವಾಗಿ ಬಹಳ ಕಾಡುತ್ತವೆ...!
  A matured article to guide one person to find happiness in himself :) :) Nice :)

  ReplyDelete
 5. ಪದ್ಮಾ ಭಟ್... ನಿಜ ಬೋರ್ ಎಂಬುದಕ್ಕೆ ಅರ್ಥವಿಲ್ಲ. ಬಹುಶಃ ಮನಸ್ಸು ಬೇಸರಗೊಂಡು, ಯಾರನ್ನೋ ಕಳಕೊಂಡೆವೋ ಎಂಬ ಭಾವದಿಂದ ಏನು ಮಾಡಬೇಕೆಂದು ತೋಚದೇ ಉದಾಸೀನಗೊಂಡಾಗ ನಾವು ಆ ಭಾವನೆಯನ್ನು ಬೋರ್ ಎಂಬ ಪದದೊಂದಿಗೆ ವ್ಯಕ್ತಪಡಿಸುತ್ತೇವಷ್ಟೆ. ಉದಾಹರಣೆಗೆ ಈಗಿನ ಸಣ್ಣ ಮಕ್ಕಳು ಕೂಡಾ ಅಯ್ಯೋ ಬೋರ್ ಆಗ್ತಿದೆ ಅನ್ನುತ್ತವೆ. ವಾಸ್ತವವಾಗಿ ಅವರ ಭಾವನೆಗೆ ಸೂಕ್ತ ಪದ ದೊರಕದಿದ್ದಾಗ ಸುಲಭವಾಗಿ ದೊರಕುವ ಬೋರ್ ಪದವನ್ನು ಸಂಭೋದಿಸುತ್ತವೆ. ಹಾಗಂತ ಅದು ಅದೇ ಅಲ್ಲ! ಅದು ಹೆಸರಿಲ್ಲದ ಭಾವನೆ.
  ಹೆಚ್ಚಾಗಿ ಮನೆಯಲ್ಲಿ ದೊಡ್ಡ ಕಾರ್ಯಕ್ರಮ ಮುಗಿದು ಎಲ್ಲಾ ಬಂಧುಗಳು ಹೋದ ಮೇಲೆ ಉಂಡಾಗುವ ನೀರಸ ಮೌನ ಇದೆಯಲ್ಲಾ ಅದನ್ನು ವಣರ್ಿಸಲು ಸೂಕ್ತ ಪದ ದೊರಕದಿದ್ದಾಗ, ಕೆಲಸ ಮಾಡುವ ಮನಸ್ಸಿಲ್ಲದಿದ್ದಾಗ ನಾವು ಅದನ್ನೇ ಬೋರ್ ಎಂದು ಬಿಡುತ್ತೇವೆ.

  ಲೇಖನ ಒಳ್ಳೆಯದಾಗಿ ಮೂಡಿಬಂದಿದೆ. ಒಟ್ಟಾರೆಯಾಗಿ ನಾವು ಸದಾ ಕ್ರಿಯಾಶೀಲರಾಗಿದ್ದರೆ ಇಂತಹ ಪದ ಪ್ರಯೋಗದ ಅನಿವಾರ್ಯತೆ ಬರಲಾರದು ಎಂಬ ಸಾರ ಅರ್ಥಪೂರ್ಣವಾಗಿದೆ. ಧನ್ಯವಾದಗಳು

  ReplyDelete