Sunday, January 22, 2012

ಅಜ್ಜಿಯಾದ ಕತೆ
MAzÁ£ÉÆAzÀÄ PÁ®zÀ°è MAzÀÆgÀ°è.. JAzÉà DgÀA¨sÀªÁUÀÄwÛzÀÝ CfÓAiÀÄ PÀvÉAiÀÄÄ AiÀiÁªÀÅzÉÆà ¤Ãw ¥ÁoÀzÉÆA¢UÉÆà fêÀ£À ªÀiË®åUÀ¼ÉÆÃA¢UÉÆà ªÀÄÄVAiÀÄÄwÛzÀݪÀÅ.¢£ÀzÀ J¯Áè ZÀlĪÀnPÉUÀ¼À°è PÀvÉAiÀÄÆ ¸ÀºÀ MAzÁVvÀÄÛ.gÁªÀiÁAiÀÄt ªÀĺÁ¨sÁgÀvÀzÀAvÀºÀ ¥ÁvÀæUÀ¼ÀÄ ªÀÄPÀ̼À ¥Á°£À »ÃgÉÆÃUÀ¼ÁVgÀÄwÛzÀݪÀÅ. CfÓ CfÓ PÀvÉ ºÉüÀfÓ JAzÀ PÀÆqÀ¯Éà MAzÀÄ ZÀÆgÀÆ ¨ÉøÀgÀ ªÀiÁrPÉƼÀîzÉ ºÉüÀÄwÛzÀݼÀÄ. Erà ¢£ÀªÀÇ AiÀiÁªÀÅzÉÆà PÉ®¸ÀUÀ½AzÀ¯ÉÆà CxÀªÁ E£ÁåªÀÅzÀjAzÀ¯ÉÆà §Æå¹AiÀiÁVgÀÄwÛzÀÝ CfÓUÀÆ ªÉƪÀÄäPÀ̽UÉ PÀvÉ ºÉüÀĪÀÅzÉAzÀgÉ CzÀÄ J°è®èzÀ ¦æÃw. vÁ£ÀÆ ªÀÄPÀ̼Éà J£ÀÄߪÀ ºÁUÉ ªÀwð¸ÀÄwÛzÀݼÀÄ. MmÁÖgÉ ªÀÄPÀ̼À ªÀiÁ£À¹PÀ ¨É¼ÀªÀtÂUÉ ¸ÀÄUÀªÀĪÁV ªÀÄ£ÉAiÀÄ ¥ÁoÀzÉÆA¢UÉ DUÀÄwÛvÀÄÛ.
   DV£À C¥Àà CªÀÄäA¢gÀÆ ¸ÀºÀ CfÓAiÀÄ PÀvÉUÀ½UÉ ¥ÉæÃgÉæ¸ÀÄwÛzÀÝgÀÄ. ªÀÄ£ÉUÉÆAzÀÄ »jAiÀÄ fêÀ EgÀ¨ÉÃPÉ£ÀÄߪÀÅzÀÄ J®ègÀ ¨sÁªÀ£ÉAiÀiÁVvÀÄÛ. ¸ÀjAiÀiÁzÀ ªÀiÁUÀðzÀ±Àð£ÀzÀ eÉÆvÉUÉ fêÀ£ÀzÀ C£ÀĨsÀªÀUÀ¼À£ÀÄß ºÉÆA¢gÀÄvÁÛgÉ D »jAiÀÄgÀÄ. ªÀÄPÀ̼À£ÀÄß  UÀĪÀÄä §gÀÄvÀÛzÉAiÉÄAzÀÄ ºÉzÀj¹ ªÀÄ®V¸ÀÄwÛzÀÝgÀÄ. FV£À ªÀÄPÀ̼ÀÄ  JµÀÄÖ §Ä¢ÝªÀAvÀjgÀÄvÁÛgÉ JAzÀgÉ UÀĪÀÄä£À£ÀÄß vÉÆÃj¸ÀÄ J£ÀÄßvÁÛgÉ.. CfÓAiÀÄ PÀvÉAiÉÄAzÀgÉ fêÀ E®èzÀ ªÀ¸ÀÄÛ«UÀÆ fêÀ vÀÄA© ¥ÁætÂUÀ¼É¯Áè ªÀiÁvÀ£ÁqÀĪÀ PÀvÉAiÀiÁVgÀÄwÛvÀÄÛ. £ÀªÀÄä AiÉÆÃZÀ£ÉUÀÆ ¤®ÄPÀzÀ CzÀÄâvÀ PÀ®à£É JAzÀgÉ vÀ¥ÁàUÀ¯ÁgÀzÀÄ.
CfÓ J¯ÁèzÀgÀÄ ºÉÆgÀl¼ÉAzÀgÉ ¸ÁPÀÄ CªÀ¼À »AzÉ ªÉƪÀÄäPÀ̼À zÀAqÀÄ. ºÀoÀ ªÀiÁrAiÀiÁzÀgÀÆ ¸ÀjAiÉÄà CfÓAiÀÄ eÉÆvÉUÉ ºÉÆÃUÀ¯ÉèÉÃPÀÄ. C¥Àà CªÀÄä¤VAvÀ®Æ CfÓAiÉÄà EµÀÖªÁVgÀÄwÛvÀÄÛ.
  EA¢£À PÁ®zÀ¯Éè¯Áè CfÓAiÀÄ eÉÆvÉUÉ ªÉƪÀÄäPÀ̼ÀÄ EgÀĪÀÅzÉà C¥ÀgÀÆ¥À. MAzÀÄ ªÉÃ¼É EzÀÝgÀÆ CfÓ £Á£É ¤AUÉ PÀvÉ ºÉüÀÄvÉÛãÉ. ¤Ã ºÉüÀĪÀ D PÁUÀPÁÌ UÀħâPÀÌ£À PÀvÉ AiÀiÁgÀÄ PÉüÁÛgÉ J£ÀÄߪÀ PÁ® §A¢zÉ. CfÓUÉà ¥Àæ±ÉßUÀ¼À£ÀÄß PÉý ¢PÁÌ¥Á¯ÁV¸ÀÄvÁÛgÉ. CzÀÄ ºÉÃUÉ, ¸ÉÊAn¦üPï jøÀ£ï EzÉAiÀiÁ JAzɯÁè PÉüÀÄvÁÛgÉ. E£ÀÄß ¥ÉÃmÉAiÀÄ°ègÉÆà ªÀÄPÀ̼ÀÄ C¥ÀgÀÆ¥ÀPÉÌAzÀÄ ªÀÄ£ÉUÉ §gÀÄvÁÛgÀµÉÖ. ºÀ½îAiÀÄ°ègÀĪÀ CdÓ CfÓAiÀÄjUÉ CªÀgÀªÀgÀÄ CªÀgÀªÀgÀ PÀvÉUÀ¼À£ÀÄß ºÉýPÉƼÀî¨ÉÃPÉà «£ÀB PÉüÀĪÀªÀgÀ ¸ÀASÉåAiÀÄAvÀÆ PÀrªÉÄAiÀiÁVzÉ. EA¢£À C¥Àà CªÀÄäA¢gÀÆ ¸ÀºÀ CfÓUÉ ºÉüÁÛgÉ ¤ªÀiï PÁ®zÀ ªÀÄÆqsÀ£ÀA©PÉUÀ¼À£É߯Áè CªÀgÀ vÀ¯ÉAiÀÄ°è vÀÄA§¨ÉÃr ºÉÆÃUÉÆà ºÉÆÃAªÀPïð ªÀiÁqÉÆÌà JAzÀÄ UÀzÀj¸ÀÄvÁÛgÉ . ¥Á¥À CªÀjUÉ MAzÀÄ ªÉÃ¼É PÉüÀĪÀ D¸ÀQÛ EzÀÝgÀÆ ©qÀ¨ÉÃPÁUÀÄvÀÛzÉ. MAzÀÄ C£ÀĨsÀ«Ã fëAiÀiÁzÀ CfÓAiÀÄ PÀvÉAiÀÄ£ÀÄß JµÀÄÖ «Ä¸ï ªÀiÁqÉÆ̼ÁÛ EzÁÝgÉ EA¢£À d£ÁAUÀ. ªÀÄÄAzÉÆAzÀÄ PÁ®PÉÌ CfÓ C£ÉÆßêÀÅî EjÛzÀèAvÉ CªÀ¼ÀÄ PÀvÉ J£ÉÆßÃzÀ£Àß ºÉýÛzÀîAvÉ CAvÁ §AzÀgÀÆ CZÀÑj¥ÀqÀ¨ÉÃQ®è.
   

Saturday, January 21, 2012

ಅವಳ ನಿರೀಕ್ಷೆ

ಪ್ರತೀ ನಾಳೆಗಾಗಿ ಕಾಯುವ ಕೆಲಸ ನಂದು
ನನ್ನವಳು ಬರಬಹುದೆಂದು
ಸಮುದ್ರದ ದಂಡೆಯ ಮೇಲೆ ಕುಳಿತು
ಹಡಗನ್ನು ನಿರೀಕ್ಷಿಸುತ್ತಿದ್ದೇನೆ
ಪ್ರತೀ ಹಡಗಿನಲ್ಲೂ ಹುಡುಕಾಡುತ್ತೇನೆ
ಎಷ್ಟೋ ವರುಷಗಳಿಂದ ಹುಡುಕುತ್ತಿದ್ದೇನೆ
ಅವಳ ಕಾಯುವಿಕೆಗಾಗಿ
ಭರವಸೆಯ ಹಡಗಿನ್ನೂ ಉಳಿದಿದೆ
ಮನದ ಮೂಲೆಯಲ್ಲಿ
ಅದೇ ಸೂರ್ಯ, ಅದೇ ಚಂದ್ರ
ನೋಡುವ ರೀತಿ ಬೇರೆಯಾಗಿದೆ ಅಷ್ಟೆ
ಎಲ್ಲವೂ ಶೂನ್ಯವೆನಿಸುತ್ತಿದೆ
ಅವಳ ಕಾಣದೆ
ತಾಯಿ ಕಳೆದು ಹೋದ ಮಗುವನ್ನು ಹುಡುಕುವ ತರಹ ಹುಡುಕುತ್ತಿದ್ದೇನೆ
ಓ ನಂತರ ಗೊತ್ತಾಯಿತು  ಅವಳು ಕುಳಿತ ಹಡಗು ಎಲ್ಲೋ
 ಕಾಣದಾಗಿದೆಯೆಂದು
ಮುಳುಗಿ ಹೋಗಿದೆಯೆಂದು ಮನ ಹೇಳಿದರೂ
ಭಾವನೆಯ ಹೃದಯ ಎನ್ನುತ್ತಿದೆ
ಅವಳಿನ್ನು ಇದ್ದಾಳೆಂದು,
ನೋಡುತ್ತೇನೆ ಯಾವಾಗ ಬರಬಹುದೆಂದು
ಕುಳಿತಿರುತ್ತೇನೆ ಅಲ್ಲಿಯೇ  ನಾನವಳ ನೋಡಿಲ್ಲ
ಆದರೂ ಗುರುತಿಸುತ್ತೇನೆ ಅವಳನ್ನು ಬಂದೊಡನೆ
 ಮಾತಿನಿಂದ
ಭಾವನೆಯಿಂದ........

Friday, January 20, 2012

ಹೇಗೆ ಸಹಿಸಲಿ ನಾ....

ಸಂಬಂಧಗಳ ಚಕ್ರವ್ಯೂಹದ ಸುಳಿಯಲಿ ಸಿಲುಕಿದೆ ಜೀವ
ಬರೀ ನೋವು ಬೇಗುದಿಗಳೆ ತುಂಬಿದೆ 
ಈ ಜೀವನ
ಜೊತೆಗಿರುವವರೆ ದ್ರೋಹ ಗೈದರೆ ,
ಸಹಿಸಲಿ ನಾ ಹ್ಯಾಂಗ
ಜನರ ಮಾತಿಗೆ ಸೊಪ್ಪು ಹಾಕುವುದೇಕೆ 
ಎನುತಿದೆ ಅಂತರಂಗ
ಗಾಳಿಮಾತಿನ ಕತೆ ನಿಜವಾದರೆ
ನನ್ನ ವಿಷಯದಲ್ಲೆಂದು ಅಳುಕಿದೆ ಮನ
ಹೇಳುವರು ತಿಳಿದವರು ಬರುವುದು
ಹಗಲು ಕತ್ತಲು ಕಳೆದು
ಆದರೆ ನನಗದು ಎಂದಿಗೂ ಸಿಗದ ಮರೀಚಿಕೆ
ಬೆಳಕು ಬರಿ ಮಿಥ್ಯೆ
( ನನ್ನ   ಫ್ರೆಂಡ್  ಗೆ ಈ ಸುಂದರ ಕವನ ಕಳುಹಿಸಿದ್ದಕ್ಕಾಗಿ  ಧನ್ಯವಾದಗಳು)

Monday, January 16, 2012

ಅಕ್ಕನ ಮದುವೆ

ಇಂದು ಮನೆಯೆಲ್ಲಾ ಸಂಭ್ರಮ ಸಡಗರ
ಮಾವಿನ ತೋರಣ ಸಿಂಗಾರ
ಹೊದಿಕೆಯಾಗಿದೆ ಚಪ್ಪರದಬ್ಬರ
ನಗುತ್ತಿದೆ ನೆಂಟರ ಬಳಗ
ಇಂದು ಅಕ್ಕನ ಮದುವೆ
ನಗಿಸುತ್ತಿದ್ದಾರೆ ಅವಳ ಕೀಟಲೆ ಮಾಡಿ
ನನಗೋ ಅಮ್ಮನಿಗೋ
ಅಕ್ಕನ ಕಳುಹಿಸಲಾರದ ಮನಸ್ಸು
ಬೇಡವೆಂದೆನಿಸುತ್ತಿದೆ
ಬೇರೆಯವರ ಮನೆಗೆ ಕಳುಹಿಸಲು,
ಅಮ್ಮನ ಕಣ್ಣಲ್ಲೂ ಮುಗ್ಧ ಪ್ರಶ್ನೆ
ಪ್ರೀತಿಯಿಂದ ಸಾಕಿದ ಮಗಳ ಹೇಗೆ ಕೊಡಲೆಂದು?
ನನ್ನ ಕೆಲಸಕ್ಕೆಂದೂ ಅಣಿಯಾಗುತ್ತಿದ್ದಳು
ಸ್ವಲ್ಪವೂ ಬೇಸರಿಸಿಕೊಳ್ಳದೆ
ಬದುಕ ಬಂಡಿ ಸಾಗಿಸಲು ಹೊರಟಿದ್ದಾಳೆ
ಅವನೇಗೆ ನೋಡಿಕೊಳ್ಳುತ್ತಾನೋ 
ನನ್ನ ಮುಗ್ಧ ಅಕ್ಕನನ್ನು
ನಮ್ಮ ಮನೆಯೀಗ ಗದ್ದಲ,ತುಂಟಾಟಗಳಿಂದ 
ನಲಿಯದೆ ಮೌನವಾಗಿದೆ
ಅವಳ ಜಗಳ,ಹಠವೆಲ್ಲಾ ಇಲ್ಲಿಯೇ ಕೊನೆ
ಎಂದೂ ಜಗಳ ಮಾಡುತ್ತಿದ್ದ ಅಕ್ಕ
ಇನ್ನೆಂದೂ ಜಗಳ ಮಾಡಬಾರದು
ಆಟವಾಡಲೂ ಬರುವುದಿಲ್ಲವಂತೆ,
ಇನ್ನು ಅವಳದೇ ಪ್ರಪಂಚ,
ಜವಾಬ್ದಾರಿ ಎಂಬ ಭಾರದ ಜಗತ್ತು
ಕೊನೆಯ ಬಾರಿ ಅವನ ಹೆಂಡತಿ ಆಗುವ ಮೊದಲು
ಅಕ್ಕನನ್ನು ಹೊಡೆದು, ಜಗಳವಾಡಿ, ತಬ್ಬಿಕೊಂಡು ಅಳಬೇಕು
ಇನ್ನೆಂದೂ ಅವಳು ಮೊದಲಿನ ಹಾಗೆ ಇರಲಾಗದು
ನಮಗೇನಿದ್ದರೂ ಅವಳು ನೆರಳು ಮಾತ್ರ.....

Thursday, January 12, 2012

ಎಲ್ಲಿಯೋ ಸಾಗುತ್ತಿದ್ದೇನೆ.......


ಒಂಟಿ ಮುದುಕಿ
ಎಲ್ಲಿಯೋ ಸಾಗುತ್ತಿದ್ದೇನೆ..
ಗೊತ್ತೂ ಇಲ್ಲ, ಗುರಿಯೂ ಇಲ್ಲ
ಈ ಊರು ಯಾವುದೆಂದು ತಿಳಿದಿಲ್ಲ,
ಎರಡು ಮಕ್ಕಳಿದ್ದರೂ ನೋಡಿಕೊಳ್ಳುವವರಿಲ್ಲ
ನನ್ನ ಬದುಕ ಬಂಡಿಗೆ ಇರುವುದು
ಒಂದೇ ಚಕ್ರ
ಎಷ್ಟು ದೂಡಿದರೂ ಮುಂದೆ ಹೋಗುತ್ತಿಲ್ಲ
ಅವರೋ ಬಿಟ್ಟು ಹೋದರು ನನ್ನ
ಮರಳಿ ಬಾರದ ಊರಿಗೆ
ಮಕ್ಕಳಿಗೂ ಈ ಮುದುಕಿಯ
ಬಾಧೆ ಬೇಡವಾಗಿದೆ.
ನೆನಪಾಗುತ್ತಿದೆ
ಮಕ್ಕಳಿಗೆ ಚಂದಮಾಮನನ್ನು ತೋರಿಸಿ
ಉಣ್ಣಿಸಿದ ದಿನ
ನಡೆಯುವಾಗ ,ಬಿದ್ದಾಗ ಏಳಿಸಿದ
ದಿನ
ಬೈದು ಹೊಡೆದು ಅಕ್ಷರ ಹೇಳಿಕೊಟ್ಟ ನೆನಪು..
ಇಂದು ಅವರಿಗೆ ಬೇಡವಾದೆ ನಾ..
ನನ್ನ ಸಾಕದಿದ್ದರೇನಂತೆ
ಹೇಗೋ ಬದುಕುತ್ತೇನೆ
ಅವರೆಂದೂ ಚೆನ್ನಾಗಿರಲಿ
ಎಂಬುದೇ ನನ್ನ ಜೀವನದ ಕನಸು

Tuesday, January 10, 2012

ಮನೆಯೆಂಬ ಮಾಯಾಜಾಲ

ಎಲ್ಲಿ ಒಳ್ಳೆಯ ಕಾಲೇಜ್ ಗಳಿವೆಯೋ ಅಲ್ಲಿ ಗಂಟು ಮೂಟೆ ಹೊತ್ತು ಗೊತ್ತಿರದ ಊರಲ್ಲಿ  ನೆಲೆ ನಿಲ್ಲುವುದು ನಮ್ಮ ಗುಣ.. ಏನಾಗಲಿ ಮುಂದೆ ಸಾಗು ನೀ.. ಎಂದುಕೊಂಡು ಇರುತ್ತೇವೆ.ನಮ್ಮದೇ ಗೆಳತಿಯರ ದಂಡು, ನಮ್ಮದೇ ಕಾಲೇಜು, ತಪ್ಪಿದಾಗ ಹೇಳಿಕೊಡುವ ಗುರುಗಳು ಎಲ್ಲವೂ ಇರುತ್ತದೆ..ಆದರೂ ಕಾಡುತ್ತದೆ. ಹೋಮ್ ಸೀಕ್ ನೆಸ್. ಖಂಡಿತವಾಗಿಯೂ ಇದೊಂದು ಮನೆಯ ಖಾಯಿಲೆ. ಅದರಲ್ಲೂ  ನಾನು ರಜೆಯ ದಿನಗಳು ಬರುತ್ತವೆಯೆಂದರೆ ಮನೆಗೆ ಹೋಗುವ ಕನಸು ಕಾಣುವುದರಲ್ಲಿ ನಿಪುಣೆ. 

ಹೋಗಲು ಹದಿನೈದು ದಿನಗಳಿರುವಾಗಲೇ ಪರೀಕ್ಷೆಗೆ ಓದುವ ಟೈಮ್ ಟೇಬಲ್ ಗಳಿಗಿಂತ ಹೆಚ್ಚು ದೊಡ್ಡದಾಗಿರುತ್ತದೆ.ನನ್ನ ಹೋಮ್ ಸೀಕ್ ಅನ್ನು ಬಿ.ಎಸ್.ಎನ್ ಎಲ್ ನ ಮನೆಗೆ ಫ್ರೀ ಕಾಲ್ ಸ್ವಲ್ಪ ಕಡಿಮೆ ಮಾಡಿದೆ. ನಮ್ಮ ಕೆಲವು ಸ್ನೇಹಿತೆಯರು ಮನೆಯಿಂದ ಬರುವುದನ್ನು ನೋಡಿ ಛೇ ಈ ಕಾಲೇಜು ನಮ್ಮ ಮನೆಯ ಹತ್ತಿರ ಇರಬೇಕಿತ್ತು.ಇಲ್ಲವೇ ನಮ್ಮ ಮನೆಯೇ ಇಲ್ಲಿ ಇರಬೇಕಿತ್ತು ಎಂದು ಅನಿಸದೆ ಇರುವುದಿಲ್ಲ. 

ಅದೇಕೋ ಗೊತ್ತಿಲ್ಲ. ಚಿಕ್ಕಂದಿನ ಆಟಗಳು ಪಾಠಗಳೆಲ್ಲಾ , ತುಂಟತನದ ಮಾತುಗಳೆಲ್ಲವೂ ಹೋಮ್ ಸೀಕ್ ಆಗಿಯೆ ಕಾಡುತ್ತಿರುತ್ತದೆ. ಪಕ್ಕದ ಮನೆಯ ಆಂಟಿಯ ಮಗಳು ಯಾವುದಾದರೊಂದಕ್ಕೆ ಹಠ ಮಾಡಿದಾಗ ನಾನೂ ಚಿಕ್ಕವನಿದ್ದಾಗ ಅದೆಷ್ಟು ಹಠಮಾರಿಯಾಗಿದ್ದೆ. ಪೇಟೆಗೆ ಕರೆದುಕೊಂಡು ಹೋಗಲು ಅಮ್ಮ ಹೆದರುತ್ತಿದ್ದಳು.ಏಕೆಂದರೆ ಪ್ರತೀಸಲವೂ ಮನೆಯಿಂದ ಒಂದು ಒಪ್ಪಂದ ಮಾಡಿಕೊಂಡು ಹೋದರೆ ಅಲ್ಲಿ ಹೋದ ನಂತರ ಬೇರೆಯೇ ಪರಿಸ್ಥಿತಿಯಾಗಿರುತ್ತಿತ್ತು.

 ಶಾಲೆಗೆ ಹೋಗುವ ಪುಟ್ಟ ಮಕ್ಕಳು ಟಾಟಾ ಮಾಡುವುದನ್ನು ನೋಡಿದರೆ ನಾನೂ ಟಾಟಾ ಮಾಡಿ , ಒಂದೊಂದು ಬಾರಿ ಸಿಟ್ಟಿನಿಂದ ಹೋಗುತ್ತಿದ್ದ ದಿನಗಳು, ಜಾತ್ರೆ ಬಂದಾಗ ಅಪ್ಪನ ಹತ್ತಿರ ಒಳ್ಳೆಯ ಮಾತುಗಳನ್ನಾಡಿ  ತೆಗೆಸಿಕೊಳ್ಳುತ್ತಿದ್ದ ಆಟಿಕೆ ಸಾಮಾನುಗಳು, ಅಣ್ಣನ ಹತ್ತಿರ ಜಗಳ ಮಾಡಿ ಸ್ವಲ್ಪ ಹೊತ್ತಿಗೇ ಸಾರಿ ಕೇಳಿದ್ದು, ಅಜ್ಜ,ಅಜ್ಜಿಯ ಹತ್ತಿರ ಮುದ್ದು ಮಾಡಿಸಿಕೊಂಡ ಅವುಗಳೆಲ್ಲಾ ಪ್ರತೀ ದಿನವೂ ಬೇಕೆಂದೆನಿಸುತ್ತದೆ.ಮನೆಗೆ ಹೋದಾಗ ಗಡಿಯಾರದ ಮುಳ್ಳು ಎಷ್ಟು ಮೋಸ ಮಾಡುತ್ತದೆ.ಎಂದೂ ಓಡದ ಮುಳ್ಳು ಆಗ ಜೋರಾಗಿ ಓಡುತ್ತದೆ.

ಮನೆಯೆಂದರೆ ಎಲ್ಲರಿಗೂ ಹಾಗೆ,ಪ್ರತೀ ಯುಗಾದಿಗೂ ಪ್ರತೀ ದೀಪಾವಳಿಗೂ, ಸಣ್ಣ ಸಣ್ಣ ಹಬ್ಬ ಹುಣ್ಣಿಮೆಗಳನ್ನು ಮನೆಯಲ್ಲಿಯೇ ಆಚರಿಸಬೇಕೆಂದೆನಿಸುತ್ತದೆ..ಹೇಗಿದ್ದರೂ ನಮ್ಮ ಊರು, ನಮ್ಮ ಮನೆ ನಮಗೆ ಚಂದವಲ್ಲವೇ?ಅದೆಷ್ಟು ಸುಂದರ ,ಅದ್ಭುತ ಎಂದೆನಿಸುತ್ತದೆ.. ಎಲ್ಲೇ ಹೋದರೂ ನಮ್ಮ ಊರಿನ ಕಡೆಯವರು ಸಿಕ್ಕರೆ ಸಾಕು. ಮುಖ ಅರಳಿಸಿ ಮಾತನಾಡಿಸಲೇಬೇಕೆಂದೆನಿಸುತ್ತದೆ..ನಮ್ ಊರಿನ ಬಸ್ ಹೆಸರು ನೋಡಿದ್ರು ಅದೆಷ್ಟು ಖುಷಿಯಾಗುತ್ತದೆ. ..ಆದರೂ ಪ್ರತೀ ಸಾರಿ ಮನೆಗೆ ಹೋದಾಗಲೂ ನನ್ನೂರಿನಲ್ಲಿ ಅದೆಷ್ಟು ಬದಲಾವಣೆಯಾಗಿರುತ್ತದೆ.. ನಾಲ್ಕಾಣೆಯ ಚಾಕಲೇಟ್ ಗಳೆಲ್ಲಾ ಬಂದಾಗಿರುತ್ತದೆ. ಐಸ್ಕ್ ಕ್ಯಾಂಡಿ ಮಾರುವವನ ಸದ್ದೇ ಇಲ್ಲ. ನಮ್ಮ ಬಾಲ್ಯದ ಸ್ನೇಹಿತರೆಲ್ಲಾ ಅವರವರ ಕೆಲಸದಲ್ಲಿ ಬ್ಯೂಸಿ. ಅಮ್ಮನ ಅಡುಗೆಗೆ ಬೈಯ್ಯುತ್ತಿದ್ದ ದಿನಗಳೆಲ್ಲಾ ಮರೆತು ಹೋಗಿ, ದಿನವೂ ಅವಳ ಅಡುಗೆಯೇ ತಿನ್ನಬೇಕೆಂದೆನಿಸುತ್ತದೆ.ಅದೇನೋ ಗೊತ್ತಿಲ್ಲ.ದೂರ ಇರುವಾಗಲೇ ಅದರ ಬೆಲೆ ಗೊತ್ತಾಗುತ್ತದೆ.ಎಂದು ಹೇಳುವ ಮಾತು ಎಷ್ಟು ಸತ್ಯ ಅಲ್ವಾ?

Friday, January 06, 2012

ಅವಳ ನೆನಪು...

ಸಂಜೆಯ ಸೂರ್ಯ ತರಿಸಿದ್ದ  ಅವಳ ನೆನಪ,
ಹಳೆಯ ಆಟ ಓಟ ಎಲ್ಲವೂ ಮನ ಕದಡುತ್ತಿತ್ತು
ಅವಳು ಪರಿಚಯವಾದ ಆ ದಿನವು ಕಣ್ಣೆದುರೆ ಮರುಕಳಿಸುವಂತಿತ್ತು
ಆಡ ಹೊರಟ ಮಾತೆಲ್ಲಾ ಕಣ್ಣೀರೇ ಆಗುತಲಿತ್ತು
ನನ್ನ ಬದುಕನ್ನೆಲ್ಲಾ ಸಮುದ್ರದ ಅಲೆ ತೇಲಿಸಿಕೊಂಡೊಯ್ದಿತ್ತು
ನನ್ನವಳನ್ನು ಬಾಚಿಕೊಂಡ ಆ ಸಮುದ್ರ 
ಬದುಕಲ್ಲಿ ಎಂದೂ ನಿಲ್ಲದ ಬಿರುಗಾಳಿಗೆ
ಕಾರಣವಾಗಿತ್ತು...

ಜೊತೆಯಲಿರಲೇ ಗೆಳೆಯ

ರಾಗವಾಗಲೇ ನೀ ಬರೆದ ಹಾಡಿಗೆ
ಬರೆಯಲೇ ನಿನಗೊಂದು ಪ್ರೀತಿಯ ಪತ್ರವಾ
ಮುನಿಸಾಗಲೇ ನಿನ್ನ ಕೋಪದ ಸೆಳೆತಕೆ,
ಆಗಲೇ ನಿನ್ನ ಜೊತೆಗೆ ಜೋಡಿತಾರೆ
ಬಣ್ಣವಾಗಲೇ ನಿನ್ನ ಮದರಂಗಿ ಚಿತ್ರಕೆ
ರೆಪ್ಪೆಯಾಗಲೇ ನಿನ್ನ ಕಣ್ಣಂಚಿನಲಿ,
ಕೂಗಿ ಕರೆಯಲೇ ನಿನ್ನ ಹೆಸರ
ಮಾತನಾಡಿಸಲೇ ನಿನ್ನ ಮೌನದ ಮನವ
ಇರಲೇ ಗೆಳೆಯಾ
 ಜೊತೆಯಲಿ,
ಬದುಕಿನುದ್ದಕ್ಕೂ ದಾರಿಯಲಿ..