Tuesday, June 04, 2013

ನೀನಾಗುವೆಯಾ..?

ಬಣ್ಣವಾಗಿ ಜೀವ ತುಂಬುವೆಯಾ

ನನ್ನ ಮದರಂಗಿ ಚಿತ್ರಕೆ..

ಬೆಳಗಿನ ಕನಸಿನಲಿ ಬಂದು ತಟ್ಟಿ

ಎಬ್ಬಿಸಿ ಪ್ರೀತಿಯಿಂದ ಕರೆಯುವೆಯಾ...

ಮುಸ್ಸಂಜೆಯ ತಂಗಾಳಿಯಲಿ ಬೆಚ್ಚನೆಯ

ಕನಸುಗಳನು ನನ್ನಲ್ಲಿ ಕಾಣುವೆಯಾ..

ಜನುಮ ದಿನದಂದು ಶುಭಾಶಯ ತಿಳಿಸುವ ಮೊದಲಿಗ

ನೀನಾಗುವೆಯಾ...

ಹೊಳೆಯುವ ಉಂಗುರದ ಶುಭ್ರ

ಹರಳು ನೀನಾಗುವೆಯಾ...

ತುಟಿಯಂಚಿನಲ್ಲಿ ಬರುವ ನಗುವಿನ

ಸೌಧವಾಗುವೆಯಾ..

ಅತ್ತಾಗ ಒಲವಿನ ಲೋಕಕ್ಕೆ  ಕರೆದೊಯ್ದು

ಸಾಂತ್ವನ ಹೇಳುವೆಯಾ..

ಬಚ್ಚಿಟ್ಟ ಆಸೆಗಳಿಗೆ ಸೂತ್ರವನು ಕಟ್ಟಿ

ಆಗಸದೆತ್ತರಕೆ ಹಾರಿಸುವೆಯಾ..

ನನ್ನ ಪಾಲಿಗೆ ಎಲ್ಲವೂ ನೀನೇ

ಆಗುವೆಯೆಂದು...??


13 comments:

  1. ಆಸೆಗಳಿಗೆ ಸೂತ್ರ ಕಟ್ಟಿ ಹಾರಿಬಿಡುವ ಪದಗಳು ಸೂಪರ್ ಆಗಿವೆ

    ReplyDelete
  2. ಚೆನಾಗಿದೆ :)..
    "ಹೊಳೆಯುವ ಉಂಗುರದ ಶುಭ್ರ
    ಹರಳು ನೀನಾಗುವೆಯಾ..."
    ಇಷ್ಟವಾಯ್ತು ...

    ReplyDelete
    Replies
    1. ಧನ್ಯವಾದಗಳು ಚಿನ್ಮಯ್

      Delete
  3. ಆಶೆ-ಆಕಾಂಶೆಯ ವಿಷಯ ಇಟ್ಟುಕೊಂಡು್ ಕವಿತೆಯ ಸಾಲಿಗೆ ಪ್ರಾಸವನ್ನ ಹೋಂದಿಸಿಕೊಂಡು ಮುಂದೆ ಸಾಗಿಸಿದ ಹಾದಿ ಚೆಂದ ಇದೆ

    ReplyDelete
  4. ಜನುಮ ದಿನದಂದು ಶುಭಾಶಯ ತಿಳಿಸುವ ಮೊದಲಿಗ
    ನೀನಾಗುವೆಯಾ...
    ಪ್ರತಿಯೊಬ್ಬ ಹುಡುಗುಗಿ ಬಯಸುವ ಹಂಬಲ

    ಚಂದ ಸಾಲುಗಲು.... ಸಕತ್ತಾಗಿದೆ.

    ReplyDelete
    Replies
    1. ಹಂಬಲವು ಕೆಲವೊಮ್ಮೆ ಕವನಗಳಾಗುತ್ತೆ... ಧನ್ಯವಾದಗಳು..

      Delete
  5. ಪ್ರಶ್ನೆಗಳಿಂದ ಕೂಡಿದ ನಿಮ್ಮ ಕವನ ಚೆನ್ನಾಗಿದೆ. ಮದರಂಗಿ ಚಿತ್ರಕ್ಕೆ ಬಣ್ಣವಾಗಿ ತುಂಬುವುದು, ಬಚ್ಚಿಟ್ಟ ಆಸೆಗಳಿಗೆ ಸೂತ್ರ ಕಟ್ಟಿ ಆಕಾಶದೆತ್ತರಕ್ಕೆ ಹಾರಿಸುವುದು' ತುಂಬಾ ಚೆನ್ನಾಗಿದೆ.
    ನನ್ನ ಬ್ಲಾಗಿಗೂ ಭೇಟಿ ಕೊಡಿ.

    ReplyDelete
    Replies
    1. ಧನ್ಯವಾದಗಳು ಸರ್..... ಖಂಡಿತ ಭೇಟಿ ಕೊಡುತ್ತೇನೆ

      Delete
  6. ಸಖತ್ತಾಗಿದೆ.. ಬ್ಲಾಗಿನ ಡಿಸೈನ್ ಸಖತ್ ಇಷ್ಟವಾಯ್ತು..

    ReplyDelete