ಬದುಕಿನ ಬದುಕು ನೀ..........
ನನ್ನೊಲವ ದಾರಿಯಲಿ ಬರಬೇಕೆನ್ನುವ
ಪ್ರೀತಿಯ ಹೆಜ್ಜೆಗಳಲಿ
ನೀನೆಂದು ಬಂದು ಸಾಗುವೆ
ಕಣ್ಣಿನಲಿ ಕಣ್ಣಂತೆ ಕಾಯುತಿರುವ
ಮನಸು ಕನಸುಗಳ
ಪಿಸುಮಾತುಗಳು.....
ನನ್ನ ಮನವು ಇಂದಿಗೂ ಎಂದಿಗೂ
ಹೇಳುತಿದೆ ಕನಸುಗಳು
ನನಸಾಗುವಂತಿದ್ದರೆ
ನಿನ್ನ ಜೊತೆಗೇ ಎಷ್ಟು ಸುಂದರವೆಂದು,
ನೀ ಕಟ್ಟುವ ಪ್ರೀತಿ ಸೌಧದಲಿ
ನನಗೆ ಜಾಗವಿದೆಯೆಂದರೆ
ಕಟ್ಟೋಣ ಬದುಕನ್ನೂ....
ಕಣ್ಣಿನ ಕ್ಯಾಮರಾದಲಿ ತೆಗೆದ
ಫೋಟೋವನ್ನು ಹೃದಯದಲಿ
ಕಟ್ಟಿಸಿಡಲೇ ..
ನೀ ಹಣತೆ ಹಚ್ಚುವೆಯಾದರೆ
ಅದರ ಬೆಳಕು ನಾನುಗುವೆ ನಿನಗೆ
ದಾರಿಯುದ್ದಕ್ಕೂ ಎಂದಿಗೂ
ಕೊನೆಯವರೆಗೂ ...
ಖಾಲಿಯಾಗದ ಒಂದಷ್ಟು ಭಾವನೆಗಳ
ಲೋಕದಲಿ
ನಾನು ನೀನು ಮಾತ್ರ..
ಬದುಕಿನಲ್ಲಿಯ ಬದುಕು ನೀನು.
ಮನಸಿನಲಿ ಮೂಢುವ ಪ್ರೇಮದ ಭಾವನೆಗಳನ್ನ ಪದ ರೂಪದಲಿ ಸುಂದರವಾಗಿ ಚಿತ್ರಿಸಿದ್ದೀರಿ.
ReplyDeleteನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ.
ಶುಭವಾಗಲಿ.
ಧನ್ಯವಾದಗಳು
Deleteಚಂದದ ಭಾವಗಳು...
ReplyDeleteಧನ್ಯವಾದಗಳು
Deleteಪ್ರೀತಿಯಲ್ಲಿನ ಭಾವನೆಗಳನ್ನು ತುಂಬಾ ಸುಂದರವಾಗಿ ಪದಗಳಲ್ಲಿ ಸಿಂಚನ ಮಾಡಿದ್ದೀರಿ.....ಸೊಗಸಾದ ಕವನ....ಅಭಿನಂದನೆಗಳು...
ReplyDeleteಧನ್ಯವಾದಗಳು ಸರ್...ಪ್ರೋತ್ಸಾಹ ಹೀಗೇ ಇರಲಿ
Deleteಆದಷ್ಟು ರಮ್ಯಗೀತೆಗಳಲ್ಲಿ ಗೇಯತೆಯನ್ನ ತುಂಬಿಸಬೇಕು. ಚೆನ್ನಾಗಿದೆ ಭಾವ.
ReplyDeleteಸುಂದರ ಬ್ಲಾಗ್ ಮತ್ತು ಬರಹ!
ReplyDeleteನನ್ನ ಬ್ಲಾಗ್ `ಅಂತರಗಂಗೆ'ಯಲ್ಲಿನ ನನ್ನ ವ್ಯಂಗ್ಯಚಿತ್ರದ ಬಗೆಗಿನ ನಿಮ್ಮ ಆಭಿಪ್ರಾಯಕ್ಕೆ ಧನ್ಯವಾದಗಳು.
j.balakrishna@gmail.com
ಚೆನಾಗಿದೆ..
ReplyDeleteಕಲ್ಪನೆಗಳು ಬಹಳ ಸೊಗಸಾಗಿದೆ...ಜೊತೆಗೆ ಆಪ್ತವಾಗುವ ಭಾವ ಕೂಡಾ..
ಏನೋ ಗೊತ್ತಿಲ್ಲಾ ನೋಡಿ,ಕವಿತೆ ಅಂದ ಕೂಡಲೇ ಅದಕ್ಕೊಂದು ಆಕಾರ ನೆನಪಾಗುತ್ತದೆ...
ನಿಮ್ಮ ಈ ಪದಗಳಿಗೆ ಒಂದು ಅಂದದ ಚೌಕಟ್ಟಿಟ್ಟರೆ ಇನ್ನೂ ಸುಂದರವಾಗುವುದೇನೋ..
ಚೆನಾಗಿದೆ..
ಬರೆಯುತ್ತಿರಿ..
ನಮಸ್ತೆ :)
ಹಾಯ್ ಪದ್ಮಾ ಜಿ ,
ReplyDeleteಒಂದು ಮುದ್ದಾದ ಕವಿತೆ ಬರೆದು ಓದಲಿಕ್ಕೆ
ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು.
ನಿಮ್ಮ ಕವಿತೆ ತುಂಬಾ ಇಷ್ಟಾ ಆಯ್ತು ಮೇಡಂ.
ಹಿಗೇ ಬರಿತಾ ಇರಿ.
nice!!
ReplyDeleteಕಣ್ಣಿನಲಿ ಕಣ್ಣಂತೆ ಕಾಯುತಿರುವ
ReplyDeleteಮನಸು ಕನಸುಗಳ
ಪಿಸುಮಾತುಗಳು.....nice ...liked it ... :)
ನೀ ಹಣತೆ ಹಚ್ಚುವೆಯಾದರೆ
ReplyDeleteಅದರ ಬೆಳಕು ನಾನುಗುವೆ ನಿನಗೆ
ದಾರಿಯುದ್ದಕ್ಕೂ ಎಂದಿಗೂ
ಕೊನೆಯವರೆಗೂ
Thumba artha poorithavaada saalugalu istavaadavu
bhavada bagge eradane maathilla
aadare bareyuva shaili padagala prayogagalanna innasthu channagi maadiddare muda needuthithhu