ನನ್ನ ಕಣ್ಣಲ್ಲಿ ನಿನ್ನ ಬಿಂಬವು
ನಿನ್ನ ಕಣ್ಣಲ್ಲಿ ನನ್ನ ಬಿಂಬವು
ಸೇರಿ ಸೃಷ್ಟಿಸಿದೆ
ಪ್ರೀತಿಯ ಜಗತ್ತನ್ನೊಂದು
ಹೃದಯ ಬಡಿತವು ಹೇಳುತ್ತಿದೆ ನಿನ್ನ ಹೆಸರ
ಹೆಸರಿಲ್ಲದ ಪ್ರೀತಿ ನೀನೆಂದು
ಮನವು ಮಾತನಾಡುತ್ತಿದೆ ಕಿವಿಗೆ ಕೇಳಿಸದಂತೆ
ನಿನ್ನ ಮನವೊಂದೇ ಕೇಳುವಂತೆ
ನೀನಿದ್ದ ನನ್ನ ಜಗತ್ತೇ ಸುಂದರವೆಂದು,
ಆಕಾಶದಂತೆ ತಿಳಿಯಾಗಿಸಿದೆ
ಪರಿಶುದ್ದ ಪ್ರೀತಿಯ
ನೀನೇ ನನ್ನ ಜೀವನವೆಂದು
ಹೇಳಬಯಸುತ್ತದೆ ನನ್ನ ಮನವೆಂದೂ
ನೀ ನನ್ನ ಜೊತೆಗಿದ್ದರೆ ಬೇರೇ ಏನೂ ಬೇಡವೆಂದು....
ನಿನ್ನ ಕಣ್ಣಲ್ಲಿ ನನ್ನ ಬಿಂಬವು
ಸೇರಿ ಸೃಷ್ಟಿಸಿದೆ
ಪ್ರೀತಿಯ ಜಗತ್ತನ್ನೊಂದು
ಹೃದಯ ಬಡಿತವು ಹೇಳುತ್ತಿದೆ ನಿನ್ನ ಹೆಸರ
ಹೆಸರಿಲ್ಲದ ಪ್ರೀತಿ ನೀನೆಂದು
ಮನವು ಮಾತನಾಡುತ್ತಿದೆ ಕಿವಿಗೆ ಕೇಳಿಸದಂತೆ
ನಿನ್ನ ಮನವೊಂದೇ ಕೇಳುವಂತೆ
ನೀನಿದ್ದ ನನ್ನ ಜಗತ್ತೇ ಸುಂದರವೆಂದು,
ಆಕಾಶದಂತೆ ತಿಳಿಯಾಗಿಸಿದೆ
ಪರಿಶುದ್ದ ಪ್ರೀತಿಯ
ನೀನೇ ನನ್ನ ಜೀವನವೆಂದು
ಹೇಳಬಯಸುತ್ತದೆ ನನ್ನ ಮನವೆಂದೂ
ನೀ ನನ್ನ ಜೊತೆಗಿದ್ದರೆ ಬೇರೇ ಏನೂ ಬೇಡವೆಂದು....