Friday, November 30, 2012

ಖುಷಿಯ ಗಂಟನ್ನು ಇರಿಸಿದ್ದವು

ಮೂಡಣದಿ ಸೂರ್ಯನ ನಸುಗೆಂಪು
ಕೆನ್ನೆಯ ಆಗಸವು
ನಾಚುತ್ತಾ ಸ್ವಾಗತಿಸುತಿತ್ತು
ಪ್ರೀತಿಯಲಿ ನೇಸರನ ತುಸು ಬೆಳಕು
ಅಂಬರವ ಹೊಳೆಯುವಂತೆ ಮಾಡಿತ್ತು
ಹಕ್ಕಿಗಳೂ ಜೊತೆ ಸೇರಿ ಹಾಡುತ್ತಾ
ಸಂಗೀತವ ಆಲಿಸುವಂತೆ ಮಾಡಿದ್ದವು
ಭಾವನೆಗಳ ಲೋಕದಲಿ
ಪಯಣಿಸುತ್ತಿದ್ದ ನಾ....ಮರೆತಿದ್ದೆ ನನ್ನನ್ನೇ!!
ತಂಗಾಳಿಯ ಹಿತ ಸ್ಪರ್ಶವು
ಒಂದಷ್ಟು  ಕನಸುಗಳನು
ಹೊತ್ತು ತಂದಿದ್ದವು,
ಇಬ್ಬನಿಯು ಮುತ್ತಿನಂತೇ
ಹೊಳೆಯುತ್ತಾ
ಖುಷಿಯ ಗಂಟನ್ನು ನನ್ನಲ್ಲಿ
ಇರಿಸಿದ್ದವು,
ಒಂಟಿತನವೆಲ್ಲಾ ಮರೆತು
ನಿಸರ್ಗದ ಸಹಜ ಸುಂದರತೆಗೆ
ನನ್ನೀ ಹೃದಯವು ಸೇರಿ ಹೋಗಿತ್ತು..





5 comments:

  1. ಹೌದು .. ಎಂಥಹ ನೋವನ್ನು ಮರೆಸಬಲ್ಲ ಶಕ್ತಿ ಪ್ರಕೃತಿಗಿದೆ ಅದೇ ನಮಗೂ ನಿಸರ್ಗಕ್ಕೂ ಇರುವ ಅವಿನಾಭಾವ ಸಂಬಂಧ ... ಸುಂದರ ಕಾವ್ಯ...
    -ಹುಸೇನ್

    ReplyDelete
    Replies
    1. ಹೌದಲ್ವಾ..ಪೃಕೃತಿಯ ಸಹಜತೆಗೆ ಬೇರೇನೂ ಸಾಟಿಯಾಗಲಾರದು...ಧನ್ಯವಾದಗಳು

      Delete