Saturday, August 11, 2012

ಮೂಡಿಸಿದೆ .........

ಮನದೊಳಗಿನ ಬೆಚ್ಚಗಿನ ಭಾವನೆಯೆಲ್ಲವೂ
ನಿನ್ನೊಲುಮೆಯಿಂದ ಸಿಹಿಯಾಗಿಸಿ
ನಿನ್ನೊಳಗಿನ ನನ್ನೀ ಬದುಕ ಕಾವ್ಯವು
ಮೂಡಿಸಿದೆ ಎಂದಿಗೂ ಬೆಳದಿಂಗಳಂತಹ
ಬೆಳಕಿನ ಪ್ರೀತಿಯ,
 ಬದುಕಿನಲ್ಲಿ ಎಂದಿಗೂ ಕಪ್ಪು ಅಮಾವಾಸ್ಯೆಯು
ಸುಳಿಯಲಾರದೆಂಬ ಭರವಸೆಯ ಯೋಚನೆ,
ನಮ್ಮೊಳಗೆ ಅರ್ಥಮಾಡಿಕೊಂಡು ಬಾಳುವ ಬಾಳಿಗೆ
 ಬಂಧದ ಬೆಸುಗೆಯು ಗಟ್ಟಿಯಾಗಿಸಿದೆ ,
 ಜೊತೆ ಮಾತನಾಡಬೇಕೆಂದಿದ್ದ
 ಮಾತೆಲ್ಲವೂ
ಮಾತನಾಡಿಸಿದೆ ಅಸಾಧ್ಯ ಮೌನವ
ಸಾವಿರ ಪದಗಳಲ್ಲೂ ತಿಳಿಸಲಾಗದ ಅವರ್ಣನೀಯ ಪ್ರೀತಿಯು
ಮಾತಿನಿಂದ ಮೂಕವಾಗಿ ಮನಸಿನೊಂದಿಗೆ ಕಣ್ಣಿನಲ್ಲಿಯೇ
ಅರ್ಥೈಸಿಬಿಟ್ಟಿದೆ

No comments:

Post a Comment