Saturday, June 30, 2012

ಆ ಮುಂಜಾವು

ವಸಂತ ಕಾಲದಿ
ಮೂಡಣ ತೆರದಿ
ಹಕ್ಕಿಗಳ ಇಂಚರವು
ಸೃಷ್ಟಿಸಿತ್ತು ಸುಮಧುರ
ಲೋಕವ
ಹೊಂಬೆಳಕಿನ ತುಸು ಮುಂಜಾವಿನ
ಇಬ್ಬನಿಯ ನೋಡಿ
ಸಂಭ್ರಮಿಸಿತ್ತು ಈ
 ನನ್ನ ಕಂಗಳು
ಹಸಿರ ಚಿಗುರಿನಲ್ಲಿ
 ಕನಸು  ಮೂಡಿ
ತುಟಿಯಂಚಿನಲಿ ಸಣ್ಣ ನಗುವು..
ಮನಸು ಕನಸಿನ ಮಾತಿಗೆ
ಆ ಬೆಳ್ ಮುಂಜಾವು ಸಾಕ್ಷಿಯಾಗಿ
ಆಲೋಚಿಸಿತ್ತು ಬದುಕಿನ ಬಗೆಗೆ
ಪೃಕೃತಿಯ ರಮಣೀಯ ದೃಶ್ಯವು
ತೋರಿಸಿತ್ತು
ಸಾಗುವ ದಾರಿಯನ್ನು..








Wednesday, June 27, 2012

ಸಾಗಬೇಕು ಬಹುದೂರ...

ದಿನಗಳು ಉರುಳುತ್ತಿವೆ
ಯಾರಿಗೂ ಕಾಯದಂತೆ,
ವೇಗವಾಗಿ ಸಾಗುತಿದೆ
ಬದುಕೆಂಬ ಗಾಡಿಯು
ನನ್ನ ಪಾಲಿನ
ಕಷ್ಟ ಸುಖಗಳು, ಅನುಭವಗಳೆಲ್ಲವೂ
ಕೇವಲ ಚಿಗುರುಗಳಷ್ಟೇ,

ಸಾಗಬೇಕಿದೆ ಇನ್ನು ಬಹುದೂರ
ಕಳೆದಿರುವ ದಿನಗಳಿಗಿಂತ ಕಳೆಯಲಿರುವ
ದಿನಗಳೇ ಹೆಚ್ಚಾದಾಗ
ಬೇಕಲ್ಲವೇ ಬದುಕಿನುದ್ದಕ್ಕೂ
ಸಾಧನೆಯ ಹೆಜ್ಜೆಗಳು
ಕಂಡ ಸಿಹಿ ಸ್ವಪ್ನಗಳಲಿ
ನನಸೆಂಬ ನಂಟಿಗೆ
ಬೇಕಾಗಿದೆ ಚಿಂತನೆಯ ಬದುಕು
ಮೌಢ್ಯತೆಗಳೆಲ್ಲ ಮೋಡದಲಿ
ಮುಸುಕಿ ಹೋಗಬೇಕಾಗಿದೆ
ಗುರಿಯೆಡೆಗೆ ಮುಖ ಮಾಡಿ
ಬದುಕಿನ ಕನಸುಗಳಿಗೆ
ಭಾವನೆ ತುಂಬಿ
ಆಗಬೇಕಿದೆ ಬದುಕೆಂಬುದು
ನನ್ನ ಪಾಲಿಗೊಂದು ಭಾವಗೀತೆ

                                                                                                                                                                                     

Sunday, June 24, 2012

ಮನವೇ ನಿನ್ನ

ನೋಟದಲಿ ನೋಡುತಿರೆ
ಹೃದಯದಲಿ ಇಂದು
ಭಾವಲೋಕದ ಸೃಷ್ಟಿಯ ಲಹರಿ
ಅರಳಿತು ಭಾವನೆ ಅರಿವಿಲ್ಲದೆ
ಬಯಸುವ ಏಕಾಂತಕೆ
ಸಂಗೀತದ  ಮಳೆಯ ಹನಿ
ಎಲ್ಲವೂ ಶೂನ್ಯವಾಯಿತು
ಮನವೇ ನಿನ್ನ ಮಾತೊಂದೇ
ನನ್ನ ಬದುಕಾಯಿತು
ಸುಳಿವಿಲ್ಲದೆ ಹೊರಟ ಮಾತೆಲ್ಲವೂ
ಮರಳಿ ಜೊತೆಯಾಯಿತು
ಚಿತ್ತಾರ ಲೋಕವೆಲ್ಲ ಗಂಭೀರದೆಡೆಗೆ
ಮುಖಮಾಡಿತು
ಬದುಕು ಹೆಣೆಯುವ ಕೆಲಸ
ಮಾಡೆಂದು ನನ್ನ ಮನವಿಂದು ಹೇಳಿತು









Wednesday, June 13, 2012

ನನ್ನ ಪ್ರೀತಿಯ ಛತ್ರಿ/ಕೊಡೆ

ಯಾಕೋ ನನ್ನ ಛತ್ರಿ ದಿನದಿಂದ ದಿನಕ್ಕೆ ಕಡ್ಡಿಯನ್ನು ಮುರಿದುಕೊಳ್ಳುತೊಡಗಿತ್ತು .
ಅದು ನನ್ನ ಪ್ರೀತಿಯ ಛತ್ರಿಯಾಗಿತ್ತು.ಮೂರು ವರುಷಗಳ ಹಿಂದೆ ಅಪ್ಪನ ಜೊತೆಗೆ
ಪೇಟೆಗೆ ಹೋದಾಗ ಬಿಳಿಯ ಬಣ್ಣದ ಪರದೆಯ ಮೇಲೆ ಕೆಂಪು ಪಾತರಗಿತ್ತಿ ಇದ್ದ ಚಿತ್ರ ನೋಡಿದೆ
.ಅದನ್ನು ಬಿಡಿಸಿದಾಗ ಪಾತರಗಿತ್ತಿ ಹಾರಿದಂತೆ ಭಾಸವಾಗುತ್ತಿತ್ತು.ಆ ಛತ್ರಿಗೂ ನನಗೂ ಯಾವ ಜನುಮದ
ಅನುಬಂಧವಿತ್ತೋ ಏನೋ..ಆ ಛತ್ರಿಯೇ ಬೇಕೆನಿಸಿ ಅದು ಚೆನ್ನಾಗಿಲ್ಲವೆಂದು ಅಪ್ಪ ಹೇಳಿದರೂ ಹಠ ಮಾಡಿ ತೆಗೆದುಕೊಂಡಿದ್ದೆ.ನಾನು ಎಲ್ಲೇ ಹೋದರೂ ಆ ಛತ್ರಿ ನನ್ನ ಜೊತೆಗೇ ಇರುತ್ತಿತ್ತು.ಮನೆಯವರಿಗ್ಯಾರಿಗೂ
ಆ ಛತ್ರಿಯನ್ನು ಒಯ್ಯಲು ಬಿಡುತ್ತಿರಲಿಲ್ಲ.ಅವರೇನಾದರೂ ಅದನ್ನು ಮುರಿದುಕೊಂಡು ಬಂದರೆ,
ಅಥವಾ ಕಾಣೆ ಮಾಡಿಕೊಂಡು ಬಂದರೆ ಎನ್ನುವ ಮಟ್ಟಿಗೆ ಆ ಛತ್ರಿಯ ಬಗೆಗಿನ ಪ್ರೀತಿ ನನ್ನದಾಗಿತ್ತು.
ನನ್ನ ಗೆಳತಿಯಾಗಿಬಿಟ್ಟಿತ್ತು ಅದು.ಮಳೆಗಾಲದ ನನ್ನ ಕನಸುಗಳು, ಭಾವನೆಗಳು ಆ ಛತ್ರಿಗೂ ಗೊತ್ತಿತ್ತು.ಆ ಛತ್ರಿಗೆ ದಕ್ಕೆಯಾಗದಿರಲೆಂದು ಅದೆಷ್ಟು ಬಿರುಗಾಳಿಯಲ್ಲಿ ನಾನೇ ತೋಯ್ದುಕೊಂಡು ಹೋಗಿದ್ದೇನೆ. ನನ್ನ ಗೆಳತಿಯರೆಲ್ಲಾ ಮಳೆಯಲ್ಲಿ ತೊಯ್ಯದಂತೆ ರಕ್ಷಿಸಿದ ನನ್ನ ಛತ್ರಿಯು ಇಂದೇಕೋ ಹಾಳಾಗುತ್ತಿದೆ.
ಛತ್ರಿ ರಿಪೇರಿ ಮಾಡುವವನ ಹತ್ತಿರ ಹೋಗಿ ರಿಪೇರಿ ಮಾಡು ಎಂದರೆ ಎಷ್ಟು ಸಿಂಪಲ್ಲಾಗಿ ಹೇಳ್ಬಿಡ್ತಾನೆ.
.ಬೇರೆ ಛತ್ರಿ ತೊಗೊಳ್ರಿ ಎಂದು...ದೂರದ ಊರಲ್ಲಿ ಮನೆಯವರು ನೆನಪಾದಾಗ ಜಾರುತ್ತಿದ್ದ ಕಣ್ಣೀರಿಗೆ
 ಛತ್ರಿ ಅಂಚಿನಲ್ಲಿ ಹರಿಯುವ ಮಳೆಯ ಹನಿಯು  ಸಾಥ್ ನೀಡುತ್ತ ನನಗೆ ಸಮಾಧಾನಿಸುತ್ತಿತ್ತು..ಆ ಛತ್ರಿ
ಇದ್ದುದ್ದರಿಂದ ಮಳೆಗಾಲವೆಂದೂ ಬೋರ್ ಅನಿಸಲೇ ಇಲ್ಲ..ಈ ಛತ್ರಿಯ ಕಡ್ಡಿಗಳು ಮುರಿದು ಹೋಗಿವೆಯಾದರೂ,
ಹೊಸ ಛತ್ರಿ ತೆಗೆದುಕೊಂಡರೂ ಈ ಛತ್ರಿಯನ್ನೇಕೋ ಕೈ ಬಿಡಲು ಏಕೋ ಮನಸ್ಸಾಗುತ್ತಿಲ್ಲ...ಎಷ್ಟೆಂದರೂ ನನ್ನ ಭಾವನೆಗಳು ಸೇರಿಲ್ಲವೇ ಆ ನನ್ನ ಪ್ರೀತಿ ಛತ್ರಿಯಲ್ಲಿ...

ಅರ್ಥವಾಯಿತೇ....

ಕಣ್ಣೀರೇ ಜೊತೆಯಾಯಿತೇ
ಆ ಒಬ್ಬಂಟಿ ಜೀವಕೆ
ಬಣ್ಣ ಬಣ್ಣದ ಕನಸುಗಳಿಗೀಗ
ಕಪ್ಪು ಬಣ್ಣವೊಂದೇ ಕಾಣುತಿದೆ
ನೋವು ಮುಸುಕಿದ ಛಾಯೆಗೆ 
ಎಲ್ಲವೂ ಬರಿದಾಗಿದೆ
ಆ ಮುಗ್ಧ  ಹೃದಯದ ಮುಗ್ಧ ಪ್ರಶ್ನೆಗಳೆಲ್ಲವೂ
ಉತ್ತರ ಸಿಗದೇ ತಡಕಾಡಿದೆ
ತವಕದಿಂದ ಮಾತನಾಡಬೇಕೆಂಬ ಹಂಬಲಕ್ಕೆ
ಪರಿಹಾರವೆಂದಿಲ್ಲ
ಪ್ರೀತಿ ಕಡಿಮೆಯಾಯಿತೆಂಬ ಉತ್ತರಕ್ಕೆ
ತಿಳಿಯಬಹುದು ಆ ಒಲವು ಕಳೆದು ಹೋದ ಮೇಲೆ
ಅರ್ಥವಾಗಬಹುದೇ ಪ್ರೀತಿ ಎಂದಾದರೂ....




Wednesday, May 02, 2012

ನೀ ನನ್ನ ಜಗತ್ತು

ನನ್ನ ಕಣ್ಣಲ್ಲಿ ನಿನ್ನ ಬಿಂಬವು
ನಿನ್ನ ಕಣ್ಣಲ್ಲಿ ನನ್ನ ಬಿಂಬವು
ಸೇರಿ ಸೃಷ್ಟಿಸಿದೆ
ಪ್ರೀತಿಯ ಜಗತ್ತನ್ನೊಂದು
ಹೃದಯ ಬಡಿತವು ಹೇಳುತ್ತಿದೆ ನಿನ್ನ ಹೆಸರ
ಹೆಸರಿಲ್ಲದ ಪ್ರೀತಿ ನೀನೆಂದು
ಮನವು ಮಾತನಾಡುತ್ತಿದೆ ಕಿವಿಗೆ ಕೇಳಿಸದಂತೆ
ನಿನ್ನ ಮನವೊಂದೇ  ಕೇಳುವಂತೆ
ನೀನಿದ್ದ  ನನ್ನ ಜಗತ್ತೇ ಸುಂದರವೆಂದು,
ಆಕಾಶದಂತೆ ತಿಳಿಯಾಗಿಸಿದೆ
ಪರಿಶುದ್ದ  ಪ್ರೀತಿಯ
 ನೀನೇ ನನ್ನ  ಜೀವನವೆಂದು
ಹೇಳಬಯಸುತ್ತದೆ ನನ್ನ ಮನವೆಂದೂ
ನೀ ನನ್ನ ಜೊತೆಗಿದ್ದರೆ ಬೇರೇ ಏನೂ ಬೇಡವೆಂದು....






Friday, March 30, 2012

ಜೊತೆಯಾಗಿರಲಿ






ಸುತ್ತ ನೀಲಿ ಆಕಾಶದಿ
ಮನಸುಗಳ ಸರಮಾಲೆಯಲಿ
ಜೊತೆಯಾಗಿಯೇ ಇರಲಿ
 ಭಾವನೆಯ ಲೋಕವಲ್ಲಿ
ಪ್ರೀತಿಯ ಗಂಧದ ಪರಿಮಳವೆಂದೂ ಮಾಸದಿರಲಿ
ಮೌನವೇ ಅರಿಯದ ನನ್ನೀ ಮನಕ್ಕೆ
ನಿನ್ನ ಮಾತೆಂದೂ ಗುನುಗುನಿಸುತಿರಲಿ
ಮಬ್ಬು ಬೆಳಕಿನಲ್ಲೂ  ನಿನ್ನ ಹೃದಯವು ಹೊಳೆದು
ತಾಜ್ ಮಹಲ್ ಗಿಂತಲೂ  ಸುಂದರ  ಬದುಕಾಗಲಿ
ಬಣ್ಣ ಬಣ್ಣದ ಕನಸುಗಳಿಗೆ ಸ್ಪಂದಿಸುವ ಹೃದಯವಾಗಿ
ಖುಷಿಯಾದ ಜೀವನವು ನನಸಾಗಲಿ
ನಿನ್ನ ಸಮಯವದು ಬೆಲೆಕಟ್ಟಲಾಗದ ಕ್ಷಣವೆಂದೂ ನನಗೆ,
ಆ ಸಮಯವೆಲ್ಲವೂ  ನನಗಾಗಿ , ಬದುಕಿಗಾಗಿ
ಎಂದೂ ಜೊತೆಯಾಗಿರಲಿ






Friday, March 16, 2012

ನಮ್ಮ ಮನೆಯ ಮುತ್ತು

ಹುಟ್ಟುವ ಮುಂಚೆಯೇ ಬೆಳೆದಿತ್ತು
ನಮ್ಮೆಲ್ಲರ ಪ್ರೀತಿಯು 
ನಮ್ಮ ಮನೆಯ ಪುಟ್ಟನ ಮೇಲೆ
ಅಂದಿನ ಮಧ್ಯಾಹ್ನ ನನಗೆಲ್ಲವೂ ಮರೆತು ಹೋಗಿತ್ತು
ಅವನು ಜನಿಸಿದನೆಂದು ಕೇಳಿದಾಗ
ಅಷ್ಟು  ಸಂಭ್ರಮದಿ ನಲಿದಿದೆ ನನ್ನೀ ಮನವು
ಅತ್ತೆ ಯಾದೆನೆಂಬ ಸಡಗರವು ನನ್ನ ಮುಖದಲ್ಲಿ ಹೊಳೆಯುತ್ತಿತ್ತು
ಎಲ್ಲರಲ್ಲಿಯೂ ನನ್ನ ಖುಷಿಯನ್ನು  ವರ್ಣಿಸಿ , ಹಂಚಿಕೊಂಡೆ
ನಮ್ಮ ಮನೆಯ ಮುತ್ತು ಅದು
ಆ ಕಂದನ ಮೇಲಿನ ಪ್ರೀತಿಯು ದಿನದಿನಕ್ಕೂ
ಹೆಚ್ಚುತ್ತಿದೆ..
ಅದೆಷ್ಟು ಖುಷಿಯಲ್ಲವೇ ಅಣ್ಣನ ಮಗನೆಂದು..
ಪದಗಳೇ ಸಾಕಾಗುತ್ತಿಲ್ಲ ಅದನ್ನು 
ವರ್ಣಿಸಲು





Wednesday, March 14, 2012

ಓ ಮನವೇ.......

ಎಲ್ಲೂ ನಿಲ್ಲದೇ ಸಾಗುತ್ತಿದೆ..
ಮನಸೆಂಬ ಹಠಮಾರಿ
ಗಾಳಿಯಾಚೆಗೆ ತೇಲುತ್ತಿದೆ
ಯಾರೀ ,ಮನಸಿನ ರೂವಾರಿ
ಇರುವುದೆಲ್ಲವ ಬಿಟ್ಟು ಹುಡುಕಿದೆ
ಏನನ್ನೋ
ಮಳೆಯಲೂ ಬಿಸಿಲಲೂ ಎನ್ನದೆ
 ಹೃದಯವ ತಟ್ಟಿ ಎಬ್ಬಿಸುತ್ತಿದೆ
ತೋಚದೆ ಮೌನಿಯಾದರೆ
ಬಂದು ಮಾತನಾಡಿಸುತ್ತದೆ.,.
ಎಷ್ಟೇ  ಒತ್ತಾಯಿಸಿದರೂ
ಕಟ್ಟಿ ಹಾಕಿಬಿಟ್ಟಿದ್ದೇನೆ ಮನಸ್ಸಾ
ಪ್ರೀತಿಗಿಂತ ಬದುಕು ದೊಡ್ಡದು
ಪ್ರೀತಿಗೇನು ಕೊರತೆಯೇ ನನಗೆ
ಅಪ್ಪ ಅಮ್ಮನ ಪ್ರೀತಿಯೆಲ್ಲವೂ ಇದೆಯೆಂದಾಗ
ನಾನೆಂದೂ ಮೋಸ ಮಾಡೆನು
ನನ್ನಮ್ಮ ಅಪ್ಪನಿಗೆ
ನನಗೇ ಗೊತ್ತು ಅವರೆಂದೂ ಬಯಸುವರು ನನ್ನ ಒಳಿತನ್ನೊಂದ
ನಾನೆಂದೂ ಅವರ ಮುದ್ದಿನ ಮಗಳು
ಅವರು ಹೇಳಿದ ಹಾಗೇ ಕೇಳಿದರೆ
ನನ್ನೀ ಬದುಕು ಬಂಗಾರವಾಗದೇ ಇದ್ದೀತೇ......
ಮೂರು ದಿನದ ಖುಷಿಗಿಂತ
ನೂರು ವರುಷದ ಬದುಕೇ ಮುಖ್ಯವಲ್ಲವೇ.....?









Wednesday, February 22, 2012

..¤Ã¤zÀÝgÉ
£ÀÀ£Àß ºÀÆ«£À PÀĸÀĪÀÄzÀ ¥ÀjªÀļÀ
UɼÉAiÀÄ
¨Ár ºÉÆÃzÀ VqÀªÀ aUÀÄj¸ÀĪÉAiÀiÁ
ºÀ¼ÉAiÀÄ £É£À¥ÀÄUÀ¼À°
ºÉƸÀ D¸ÉAiÀÄ aUÀÄj£À°
§gÀĪÉAiÀiÁ eÉÆvÉUÉ
PÉÆ£ÉvÀ£ÀPÀ
¸ÀÄAzÀgÀ UɼÉAiÀĤVAvÀ
fêÀ£À ¸ÀÄAzÀgÀ UÉÆ½¸ÀĪÀ UɼÉAiÀÄ PÀ£À¸ÀÄ £ÀAzÀÄ
¤£Àß PÀtÂÚ£À° PÁtÄªÉ £Á CªÀÄÈvÀzÀ ©AzÀÄ
¤£Àß PÀtÚ°è PÀuÁÚV EgÀĪÉ
F ºÀÈzÀAiÀÄ EgÀĪÀ vÀ£ÀPÀ
£À¤ßà fêÀ£À zÉÆÃtÂAiÀÄ £ÀqɸÀĪÉAiÀiÁ
£Á«PÀ£ÁV §zÀÄPÀ ¸ÁUÀgÀ zÁn¸ÀĪÉAiÀiÁ?
¤Ã AiÀiÁgÉAzÀÄ UÉÆwÛ®è £À£ÀUÉ
DzÀgÉ ¥ÀÄlÖ PÀ£À¸ÀÄ EzÉ ªÀÄ£ÀzÀ M¼ÀUÉ
AiÀiÁªÁUÀ¯ÉÆÃ §gÀĪÀ UɼÉAiÀÄ£À §UÉUÉ PÀ£À¸ÀÄ £ÉÃAiÀÄÝ
ºÀÄqÀÄV
§AzÉà §gÀÄvÁÛ£É £À£Àß ¤jÃPÉëAiÀÄ
£Á£ÀAzÀÄPÉÆAqÀAvÉ