Wednesday, June 27, 2012

ಸಾಗಬೇಕು ಬಹುದೂರ...

ದಿನಗಳು ಉರುಳುತ್ತಿವೆ
ಯಾರಿಗೂ ಕಾಯದಂತೆ,
ವೇಗವಾಗಿ ಸಾಗುತಿದೆ
ಬದುಕೆಂಬ ಗಾಡಿಯು
ನನ್ನ ಪಾಲಿನ
ಕಷ್ಟ ಸುಖಗಳು, ಅನುಭವಗಳೆಲ್ಲವೂ
ಕೇವಲ ಚಿಗುರುಗಳಷ್ಟೇ,

ಸಾಗಬೇಕಿದೆ ಇನ್ನು ಬಹುದೂರ
ಕಳೆದಿರುವ ದಿನಗಳಿಗಿಂತ ಕಳೆಯಲಿರುವ
ದಿನಗಳೇ ಹೆಚ್ಚಾದಾಗ
ಬೇಕಲ್ಲವೇ ಬದುಕಿನುದ್ದಕ್ಕೂ
ಸಾಧನೆಯ ಹೆಜ್ಜೆಗಳು
ಕಂಡ ಸಿಹಿ ಸ್ವಪ್ನಗಳಲಿ
ನನಸೆಂಬ ನಂಟಿಗೆ
ಬೇಕಾಗಿದೆ ಚಿಂತನೆಯ ಬದುಕು
ಮೌಢ್ಯತೆಗಳೆಲ್ಲ ಮೋಡದಲಿ
ಮುಸುಕಿ ಹೋಗಬೇಕಾಗಿದೆ
ಗುರಿಯೆಡೆಗೆ ಮುಖ ಮಾಡಿ
ಬದುಕಿನ ಕನಸುಗಳಿಗೆ
ಭಾವನೆ ತುಂಬಿ
ಆಗಬೇಕಿದೆ ಬದುಕೆಂಬುದು
ನನ್ನ ಪಾಲಿಗೊಂದು ಭಾವಗೀತೆ

                                                                                                                                                                                     

7 comments:

  1. ಚನ್ನಾಗಿದೆ.... ಆಗಲಿ ಬದುಕೆಂಬುದು ನಿಮ್ಮ ಪಾಲಿಗೆ ಭಾವಗೀತೆ..!!!

    ReplyDelete
  2. ಚೆಂದದ ಕವನ.ನಿಮ್ಮ ಹಾರೈಕೆಯಂತೆಯೇ ನಿಮ್ಮ ಬದುಕೊಂದು ಸುಂದರ ಭಾವ ಗೀತೆಯಾಗಲೀ ಎನ್ನುವುದೇ ಎನ್ನುವುದೇ ನಮ್ಮೆಲ್ಲರ ಹಾರೈಕೆ.ನನ್ನ ಬ್ಲಾಗಿಗೂ ಬನ್ನಿ.ನಮಸ್ಕಾರ.

    ReplyDelete
    Replies
    1. ಹೌದಲ್ವಾ..ನಾವು ಅಂದುಕೊಂಡ ನಮ್ಮೆಲ್ಲ ಕನಸುಗಳು ನನಸಾಗಿ ಬದುಕು ಭಾವಗೀತೆಯಾದರೆ ಎಷ್ಟೊಂದು ಸುಂದರ ಜೀವನ

      Delete
  3. ಭಾವನೆಗಳ ಚಿಗುರಿಗೆ.. ಬಾಳು ಸಿಕ್ಕಾಗ ಆಗಬಹುದು ನಿಮ್ಮ ಬಾಳೊಂದು ಭಾವಗೀತೆ.. ತುಂಬಾ ಚನ್ನಾಗಿದೆ.. ನಿಮ್ಮ ಕವನ.. ಬರಿತಾ ಇರಿ.. ಹ ಹಾಗೇ ನನ್ನ ದೊಂದು ಪುಟ್ಟ ಬ್ಲಾಗ್ ಇದೆ.. ಒಮ್ಮೆ ಇಣುಕಿ ನೋಡಿ.. www.benakakr.blogspot.com

    ReplyDelete