Monday, September 17, 2012

ಹಬ್ಬಕ್ಕೂ ಊರಿಗೂ.....

ಹಬ್ಬವೆಂದರೇ ಹಾಗೇ ಪ್ರತೀ ಹಬ್ಬಕ್ಕೂ ಊರಲ್ಲಿರಬೇಕೆನ್ನುವ ಆಸೆ....

ಇನ್ನೂ ತಿಂಗಳು ಇರುವಾಗಲೇ ಕ್ಯಾಲೆಂಡರ್ ತಿರುವಿ ಹಾಕಿ 

ದಿನ ಎಣಿಸಲು ಶುರು ಮಾಡಲಾರಂಭಿಸುವುದು...

ಈ ಹಾಸ್ಟೇಲಿನ ಟೈಂ ಟು ಟೈಂ ದಿನಚರಿಗಳು, ಒಂದಷ್ಟು ಸ್ಟ್ರಿಕ್ಟ್ ನೆಸ್ 

ಸಾಕಾಗಿಹೋಗಿರುತ್ತದೆ..ಅತೀ ಭಾವದ ಮನಸು ಊರನ್ನು ನೋಡುವ 

ಕನಸಿನಲಿ ಮುಳುಗಿ ಹೋಗಿರುತ್ತೆ..ಅಮ್ಮನ ಹತ್ತಿರ ಹೇಳುವ ಸುದ್ದಿಗಳು 

ಒಂದಷ್ಟು ಪೆಂಡಿಂಗ್ ನಲ್ಲಿರುತ್ತೆ..ದಿನಾ ಕಾಲೇಜು ಹಾಸ್ಟೇಲು ಎಂದು 

ಇರುವವರಿಗೆ ಊರಿಗೆ ಹೋಗುವುದು ಅದರಲ್ಲೂ ಹಬ್ಬಕ್ಕೆ ಹೋಗುವುದೆಂದರೆ 

ಎಲ್ಲಿಲ್ಲದ ಸಂಭ್ರಮ..ಆದರೆ ಈ ಹಬ್ಬಕ್ಕೆ ಪರೀಕ್ಷೆಗೆ ಅದೇನು ನಂಟೋ 

ತಿಳಿಯದು..ಜ್ಯೋತಿಷ್ಯಿಗಳ ಹತ್ತಿರ ದಿನ ನೋಡಿ ಇಟ್ಟಂತೆ ಪ್ರತೀ ಭಾರಿಯೂ 

ಹಬ್ಬಕ್ಕೆ ಹೋಗುವ ಕನಸಿಗೆ ಈ ಪರೀಕ್ಷೆಯು ಅಡೆತಡೆ..ಒಂದಷ್ಟು ಬೈಗುಳ 

ರೇಗಾಟ ಎಲ್ಲವೂ ಇದ್ದರೂ ಏನೂ ಮಾಡಲಾಗದ ಮಾತು.. ಈ ಪರೀಕ್ಷೆ ಕಂಡು

 ಹಿಡಿದ ಮಹಾತ್ಮರು ಯಾರಪ್ಪಾ ಎಂದು ಅನಿಸುವುದುಂಟು.. ಮನಸ್ಸೆಲ್ಲವೂ

 ಊರಲ್ಲಿಯೇ ಇರುತ್ತೆ.. ಯಾವಾಗಲೂ ಅಷ್ಟೆ ..ಅಂದುಕೊಂಡಿದ್ದೆಲ್ಲಾ 

ಆಗಬೇಕಲ್ಲ.. ಹಬ್ಬಕ್ಕೆ ಮನೆಯವರೆಲ್ಲಾ ಸೇರುತ್ತೇವಲ್ಲಾ ಎನ್ನುವ ಖುಷಿ 

ಒಂದೆಡೆಯಾದರೆ , ದೂರದ ಊರಿನಲ್ಲಿ ನೌಕರಿ ಮಾಡುತ್ತಿರುವ 

ಕುಟುಂದವರೆಲ್ಲರೂ ಸಿಗುತ್ತಾರೆಂಬ ಖುಷಿ..ಈ ಖುಷಿಯೆಲ್ಲವೂ ಏನೇ ಇದ್ದರೂ 

ಊರಿಗೆ ಹೋಗುವುದಾದರೆ ಮಾತ್ರ..ಬಸ್, ಟ್ರೇನ್ ಎಲ್ಲವೂ ಎಷ್ಟೇ ರಶ್ 

ಇದ್ದರೂ ಹೋಗಿಯೇಬಿಡಬೇಕೆನ್ನುವ ಹಠ...

ಅದೇನೇ ಇರಲಿ ಈ ಬಾರಿ ಅಧಿಕಮಾಸ ಬಂದಿದ್ದರಿಂದ 

ಪ್ರತೀ ಬಾರಿಯ ಹಬ್ಬದ ದಿನಗಳಿಗಿಂತ ಮುಂದೆ ಇರುವುದರಿಂದ  

ಪರೀಕ್ಷೆಯಿಂದ ಹಬ್ಬ ತಪ್ಪಿಸಿಕೊಂಡಿತು..ಈ ಬಾರಿಯ ಹಬ್ಬಕ್ಕೆ ಊರಲ್ಲಿಯೇ 

ಇರುವುದೇ ಖುಷಿ..

2 comments: