Thursday, February 09, 2012

ಬದುಕುವೆ ನಿನ್ನ ನಗುವಿನಲ್ಲಿ

ನಿನ್ನ ನಗುವಿನಲ್ಲಿ ಅಡಗಿದೆ
ನನ್ನೀ ಬದುಕು
ನಿನ್ನ ಕಿರುನಗುವಿನೊಂದಿಗೇ  ಬದುಕುವೆ..
ನಾನೂ ನಗುತ್ತ
ಭವಿಷ್ಯದ ಕನಸು ಕಾಣುತ್ತ
ನನ್ನ ಕಣ್ಣಿನಲ್ಲಿ ನಿನ್ನ ಬಿಂಬವ ತೆಗೆದು
ಬದುಕುವೆ ಕಣ್ಣ ನೋಡುತ್ತ
ಕೊನೆ ಉಸಿರಿರುವರೆಗೂ.....
ಬಂಧಿಸುವೆ ನಿನ್ನ ಹೃದಯದ 
ಗೂಡಿನಲ್ಲಿ
ಪ್ರೀತಿಯ ಮಾತಿನಲಿ...
ಸುಂದರ ಜೀವನದತ್ತ
ಒಲುಮೆಯ ಸೌಧದಲಿ.................






2 comments:

  1. 'ನಿನ್ನ ನಗುವಲಿ ನನ್ನ ನಗುವಿದೆ ಬೇಕು ಏನು ನನಗೆ
    ಕಣ್ಣಕೊಳದಲಿ ಕಾಣಲಿಲ್ಲವೆ ನನ್ನ ಪ್ರೀತಿ ನಿನಗೆ'
    ಎಂಬ ನನ್ನದೂ ಒಂದು ಕವಿತೆ ಇದೆ. 2003 ರಲ್ಲಿ ಪ್ರಕಟಿತ ನನ್ನ 'ಮೋಡ ಕಟ್ಟೇತಿ' ಕವನ ಸಂಕಲನದಲ್ಲಿ ಈ ಹಾಡು (ಅಂದರೆ ಹಾಡಲಿಕ್ಕೆ ಬರುವಂಥದ್ದು) ಇದೆ. ಸಂವೇದನೆಗಳು ಹುಟ್ಟಿಕೊಳ್ಳುವ ಕಾಲಘಟ್ಟಗಳು ಭಿನ್ನವಾಗಿದ್ದರೂ ಅವುಗಳ ನೆಲೆಮೂಲ ಒಂದೇ ಆಗಿರುತ್ತದೆ ಎಂಬುದಕ್ಕೆ ನಿಮ್ಮ ಕವಿತೆ ಕಾಣಿಸಿದೆ. ನಿಮ್ಮ ಕವಿತೆ ಯುವಮನಸ್ಸುಗಳನ್ನು ಮುಟ್ಟಬಲ್ಲದು ; ತಟ್ಟಬಲ್ಲದು.

    ReplyDelete