Friday, January 20, 2012

ಹೇಗೆ ಸಹಿಸಲಿ ನಾ....

ಸಂಬಂಧಗಳ ಚಕ್ರವ್ಯೂಹದ ಸುಳಿಯಲಿ ಸಿಲುಕಿದೆ ಜೀವ
ಬರೀ ನೋವು ಬೇಗುದಿಗಳೆ ತುಂಬಿದೆ 
ಈ ಜೀವನ
ಜೊತೆಗಿರುವವರೆ ದ್ರೋಹ ಗೈದರೆ ,
ಸಹಿಸಲಿ ನಾ ಹ್ಯಾಂಗ
ಜನರ ಮಾತಿಗೆ ಸೊಪ್ಪು ಹಾಕುವುದೇಕೆ 
ಎನುತಿದೆ ಅಂತರಂಗ
ಗಾಳಿಮಾತಿನ ಕತೆ ನಿಜವಾದರೆ
ನನ್ನ ವಿಷಯದಲ್ಲೆಂದು ಅಳುಕಿದೆ ಮನ
ಹೇಳುವರು ತಿಳಿದವರು ಬರುವುದು
ಹಗಲು ಕತ್ತಲು ಕಳೆದು
ಆದರೆ ನನಗದು ಎಂದಿಗೂ ಸಿಗದ ಮರೀಚಿಕೆ
ಬೆಳಕು ಬರಿ ಮಿಥ್ಯೆ




( ನನ್ನ   ಫ್ರೆಂಡ್  ಗೆ ಈ ಸುಂದರ ಕವನ ಕಳುಹಿಸಿದ್ದಕ್ಕಾಗಿ  ಧನ್ಯವಾದಗಳು)

1 comment:

  1. ಕೆಲವು ಮನಸ್ಸಿನ ಮುಕ್ತ ವಿಷಯಗಳ ವಾಸ್ತವತೆ ಮಿಗಿಲಾದ ಅನುಭವದ ಮೆಲುಕು. ಅನುಭವವೊಂದು ಅನುಭಾವವಾಗೋದೇ ಹೀಗೆ. ಸಂಬಂಧಗಳಾಚೆಯೂ ಬದುಕು ಇದೆ ; ಕೇವಲ ವಿಷಾದ, ನಿರಾಸೆಗಳೇ ಎಲ್ಲವೂ ಅಲ್ಲ. ಪಥ ಬದಲಾವಣೆಯ ಸಂಕ್ರಮಣ ಕಾಲದಲ್ಲಿ ಇಂಥ ಗೊಂದಲಗಳು ಸಹಜ. ಕವಿತೆ ಸಹಜವಾಗಿ ಮೂಡಿಬಂದಿದೆ.ಚೆಂದಾಗಿದೆ. ಈ ಭಾವಸ್ಪಂದನ ಮಾತ್ರ ಭಿನ್ನವಾಗಿರಲಿ. ಹಂಬಲಿಕೆಯಂತೂ ಇದ್ದೇ ಇರುತ್ತದೆ ; ಜೊತೆಗೆ ವಾಸ್ತವ ಪ್ರಪಂಚದ ಅನಾವರಣ ಕೂಡ ನಮ್ಮ ಆದ್ಯತೆಯಾಗಬೇಕು.

    ReplyDelete