Monday, January 16, 2012

ಅಕ್ಕನ ಮದುವೆ

ಇಂದು ಮನೆಯೆಲ್ಲಾ ಸಂಭ್ರಮ ಸಡಗರ
ಮಾವಿನ ತೋರಣ ಸಿಂಗಾರ
ಹೊದಿಕೆಯಾಗಿದೆ ಚಪ್ಪರದಬ್ಬರ
ನಗುತ್ತಿದೆ ನೆಂಟರ ಬಳಗ
ಇಂದು ಅಕ್ಕನ ಮದುವೆ
ನಗಿಸುತ್ತಿದ್ದಾರೆ ಅವಳ ಕೀಟಲೆ ಮಾಡಿ
ನನಗೋ ಅಮ್ಮನಿಗೋ
ಅಕ್ಕನ ಕಳುಹಿಸಲಾರದ ಮನಸ್ಸು
ಬೇಡವೆಂದೆನಿಸುತ್ತಿದೆ
ಬೇರೆಯವರ ಮನೆಗೆ ಕಳುಹಿಸಲು,
ಅಮ್ಮನ ಕಣ್ಣಲ್ಲೂ ಮುಗ್ಧ ಪ್ರಶ್ನೆ
ಪ್ರೀತಿಯಿಂದ ಸಾಕಿದ ಮಗಳ ಹೇಗೆ ಕೊಡಲೆಂದು?
ನನ್ನ ಕೆಲಸಕ್ಕೆಂದೂ ಅಣಿಯಾಗುತ್ತಿದ್ದಳು
ಸ್ವಲ್ಪವೂ ಬೇಸರಿಸಿಕೊಳ್ಳದೆ
ಬದುಕ ಬಂಡಿ ಸಾಗಿಸಲು ಹೊರಟಿದ್ದಾಳೆ
ಅವನೇಗೆ ನೋಡಿಕೊಳ್ಳುತ್ತಾನೋ 
ನನ್ನ ಮುಗ್ಧ ಅಕ್ಕನನ್ನು
ನಮ್ಮ ಮನೆಯೀಗ ಗದ್ದಲ,ತುಂಟಾಟಗಳಿಂದ 
ನಲಿಯದೆ ಮೌನವಾಗಿದೆ
ಅವಳ ಜಗಳ,ಹಠವೆಲ್ಲಾ ಇಲ್ಲಿಯೇ ಕೊನೆ
ಎಂದೂ ಜಗಳ ಮಾಡುತ್ತಿದ್ದ ಅಕ್ಕ
ಇನ್ನೆಂದೂ ಜಗಳ ಮಾಡಬಾರದು
ಆಟವಾಡಲೂ ಬರುವುದಿಲ್ಲವಂತೆ,
ಇನ್ನು ಅವಳದೇ ಪ್ರಪಂಚ,
ಜವಾಬ್ದಾರಿ ಎಂಬ ಭಾರದ ಜಗತ್ತು
ಕೊನೆಯ ಬಾರಿ ಅವನ ಹೆಂಡತಿ ಆಗುವ ಮೊದಲು
ಅಕ್ಕನನ್ನು ಹೊಡೆದು, ಜಗಳವಾಡಿ, ತಬ್ಬಿಕೊಂಡು ಅಳಬೇಕು
ಇನ್ನೆಂದೂ ಅವಳು ಮೊದಲಿನ ಹಾಗೆ ಇರಲಾಗದು
ನಮಗೇನಿದ್ದರೂ ಅವಳು ನೆರಳು ಮಾತ್ರ.....









3 comments:

  1. ಅಕ್ಕನ ಮದುವೆಯ ಬಗ್ಗೆ ನೀವು ಮಾಡಿಕೊಂಡಿರುವ ಕಲ್ಪನೆ ನಿಜಕ್ಕೂ ವಾಸ್ತವ ! ನಿರೀಕ್ಷೆ ಸುಳ್ಳಾಗಲಿಲ್ಲ. ನಿಮ್ಮ ಬ್ಲಾಗ್ ಚೆನ್ನಾಗಿ ಬರುತ್ತಿದೆ. ಅಭಿನಂದನೆಗಳು !

    ReplyDelete
  2. ಟೈಮಿಂಗ್ ಸೆಟ್ಟಿಂಗ್ ಸರಿ ಇಲ್ಲ. ಬದಲಾವಣೆ ಮಾಡಿಕೊಳ್ಳಿ. ನನ್ನ 3 ಬ್ಲಾಗ್ಸ್ ನೋಡಿತ್ತಿದ್ದೀರಲ್ಲ ; 1. (ಕಾರಣಿಕ)http://karanik75karanik@blogspot.com 2. (ವಾದ-ಸಂವಾದ)http://karanik.wordpress.com 3. (ಹೀಗೆ ಸುಮ್ಮನೆ)http://karanik75.blogspot.com

    ReplyDelete
  3. nice...heart touchable lines re

    ReplyDelete