Thursday, January 12, 2012

ಎಲ್ಲಿಯೋ ಸಾಗುತ್ತಿದ್ದೇನೆ.......


ಒಂಟಿ ಮುದುಕಿ
ಎಲ್ಲಿಯೋ ಸಾಗುತ್ತಿದ್ದೇನೆ..
ಗೊತ್ತೂ ಇಲ್ಲ, ಗುರಿಯೂ ಇಲ್ಲ
ಈ ಊರು ಯಾವುದೆಂದು ತಿಳಿದಿಲ್ಲ,
ಎರಡು ಮಕ್ಕಳಿದ್ದರೂ ನೋಡಿಕೊಳ್ಳುವವರಿಲ್ಲ
ನನ್ನ ಬದುಕ ಬಂಡಿಗೆ ಇರುವುದು
ಒಂದೇ ಚಕ್ರ
ಎಷ್ಟು ದೂಡಿದರೂ ಮುಂದೆ ಹೋಗುತ್ತಿಲ್ಲ
ಅವರೋ ಬಿಟ್ಟು ಹೋದರು ನನ್ನ
ಮರಳಿ ಬಾರದ ಊರಿಗೆ
ಮಕ್ಕಳಿಗೂ ಈ ಮುದುಕಿಯ
ಬಾಧೆ ಬೇಡವಾಗಿದೆ.
ನೆನಪಾಗುತ್ತಿದೆ
ಮಕ್ಕಳಿಗೆ ಚಂದಮಾಮನನ್ನು ತೋರಿಸಿ
ಉಣ್ಣಿಸಿದ ದಿನ
ನಡೆಯುವಾಗ ,ಬಿದ್ದಾಗ ಏಳಿಸಿದ
ದಿನ
ಬೈದು ಹೊಡೆದು ಅಕ್ಷರ ಹೇಳಿಕೊಟ್ಟ ನೆನಪು..
ಇಂದು ಅವರಿಗೆ ಬೇಡವಾದೆ ನಾ..
ನನ್ನ ಸಾಕದಿದ್ದರೇನಂತೆ
ಹೇಗೋ ಬದುಕುತ್ತೇನೆ
ಅವರೆಂದೂ ಚೆನ್ನಾಗಿರಲಿ
ಎಂಬುದೇ ನನ್ನ ಜೀವನದ ಕನಸು





3 comments:

  1. good keep it up dear and all the best for all

    ReplyDelete
  2. good going....

    keep writting.....Jai Ho !!

    ReplyDelete
  3. ಜೀವನ ಆಶಾವಾದ ಪುತ್ಠಳಿ ಇದನ್ನ ಹೇಗೆ ಬರುತ್ತೋ ಹಾಗೆ ಸ್ವೀಕರಿಸಿ ಬದುಕುವುದನ ಕಲಿಯಬೇಕು ಎನ್ನುವುದನ್ನು ವಯೋವೃದ್ಧೆಯ ಮೂಲಕ ಹೇಳಿದ ಕವನ ಇಷ್ಟವಾಯ್ತು.... ಆದರೆ ಅಕ್ಷರ ಸ್ಪಷ್ಠವಾಗಿಲ್ಲ ಅದರ ಬಣ್ಣ ಬದಲಿಸಿ.

    ReplyDelete