Tuesday, January 10, 2012

ಮನೆಯೆಂಬ ಮಾಯಾಜಾಲ

ಎಲ್ಲಿ ಒಳ್ಳೆಯ ಕಾಲೇಜ್ ಗಳಿವೆಯೋ ಅಲ್ಲಿ ಗಂಟು ಮೂಟೆ ಹೊತ್ತು ಗೊತ್ತಿರದ ಊರಲ್ಲಿ  ನೆಲೆ ನಿಲ್ಲುವುದು ನಮ್ಮ ಗುಣ.. ಏನಾಗಲಿ ಮುಂದೆ ಸಾಗು ನೀ.. ಎಂದುಕೊಂಡು ಇರುತ್ತೇವೆ.ನಮ್ಮದೇ ಗೆಳತಿಯರ ದಂಡು, ನಮ್ಮದೇ ಕಾಲೇಜು, ತಪ್ಪಿದಾಗ ಹೇಳಿಕೊಡುವ ಗುರುಗಳು ಎಲ್ಲವೂ ಇರುತ್ತದೆ..ಆದರೂ ಕಾಡುತ್ತದೆ. ಹೋಮ್ ಸೀಕ್ ನೆಸ್. ಖಂಡಿತವಾಗಿಯೂ ಇದೊಂದು ಮನೆಯ ಖಾಯಿಲೆ. ಅದರಲ್ಲೂ  ನಾನು ರಜೆಯ ದಿನಗಳು ಬರುತ್ತವೆಯೆಂದರೆ ಮನೆಗೆ ಹೋಗುವ ಕನಸು ಕಾಣುವುದರಲ್ಲಿ ನಿಪುಣೆ. 

ಹೋಗಲು ಹದಿನೈದು ದಿನಗಳಿರುವಾಗಲೇ ಪರೀಕ್ಷೆಗೆ ಓದುವ ಟೈಮ್ ಟೇಬಲ್ ಗಳಿಗಿಂತ ಹೆಚ್ಚು ದೊಡ್ಡದಾಗಿರುತ್ತದೆ.ನನ್ನ ಹೋಮ್ ಸೀಕ್ ಅನ್ನು ಬಿ.ಎಸ್.ಎನ್ ಎಲ್ ನ ಮನೆಗೆ ಫ್ರೀ ಕಾಲ್ ಸ್ವಲ್ಪ ಕಡಿಮೆ ಮಾಡಿದೆ. ನಮ್ಮ ಕೆಲವು ಸ್ನೇಹಿತೆಯರು ಮನೆಯಿಂದ ಬರುವುದನ್ನು ನೋಡಿ ಛೇ ಈ ಕಾಲೇಜು ನಮ್ಮ ಮನೆಯ ಹತ್ತಿರ ಇರಬೇಕಿತ್ತು.ಇಲ್ಲವೇ ನಮ್ಮ ಮನೆಯೇ ಇಲ್ಲಿ ಇರಬೇಕಿತ್ತು ಎಂದು ಅನಿಸದೆ ಇರುವುದಿಲ್ಲ. 

ಅದೇಕೋ ಗೊತ್ತಿಲ್ಲ. ಚಿಕ್ಕಂದಿನ ಆಟಗಳು ಪಾಠಗಳೆಲ್ಲಾ , ತುಂಟತನದ ಮಾತುಗಳೆಲ್ಲವೂ ಹೋಮ್ ಸೀಕ್ ಆಗಿಯೆ ಕಾಡುತ್ತಿರುತ್ತದೆ. ಪಕ್ಕದ ಮನೆಯ ಆಂಟಿಯ ಮಗಳು ಯಾವುದಾದರೊಂದಕ್ಕೆ ಹಠ ಮಾಡಿದಾಗ ನಾನೂ ಚಿಕ್ಕವನಿದ್ದಾಗ ಅದೆಷ್ಟು ಹಠಮಾರಿಯಾಗಿದ್ದೆ. ಪೇಟೆಗೆ ಕರೆದುಕೊಂಡು ಹೋಗಲು ಅಮ್ಮ ಹೆದರುತ್ತಿದ್ದಳು.ಏಕೆಂದರೆ ಪ್ರತೀಸಲವೂ ಮನೆಯಿಂದ ಒಂದು ಒಪ್ಪಂದ ಮಾಡಿಕೊಂಡು ಹೋದರೆ ಅಲ್ಲಿ ಹೋದ ನಂತರ ಬೇರೆಯೇ ಪರಿಸ್ಥಿತಿಯಾಗಿರುತ್ತಿತ್ತು.

 ಶಾಲೆಗೆ ಹೋಗುವ ಪುಟ್ಟ ಮಕ್ಕಳು ಟಾಟಾ ಮಾಡುವುದನ್ನು ನೋಡಿದರೆ ನಾನೂ ಟಾಟಾ ಮಾಡಿ , ಒಂದೊಂದು ಬಾರಿ ಸಿಟ್ಟಿನಿಂದ ಹೋಗುತ್ತಿದ್ದ ದಿನಗಳು, ಜಾತ್ರೆ ಬಂದಾಗ ಅಪ್ಪನ ಹತ್ತಿರ ಒಳ್ಳೆಯ ಮಾತುಗಳನ್ನಾಡಿ  ತೆಗೆಸಿಕೊಳ್ಳುತ್ತಿದ್ದ ಆಟಿಕೆ ಸಾಮಾನುಗಳು, ಅಣ್ಣನ ಹತ್ತಿರ ಜಗಳ ಮಾಡಿ ಸ್ವಲ್ಪ ಹೊತ್ತಿಗೇ ಸಾರಿ ಕೇಳಿದ್ದು, ಅಜ್ಜ,ಅಜ್ಜಿಯ ಹತ್ತಿರ ಮುದ್ದು ಮಾಡಿಸಿಕೊಂಡ ಅವುಗಳೆಲ್ಲಾ ಪ್ರತೀ ದಿನವೂ ಬೇಕೆಂದೆನಿಸುತ್ತದೆ.ಮನೆಗೆ ಹೋದಾಗ ಗಡಿಯಾರದ ಮುಳ್ಳು ಎಷ್ಟು ಮೋಸ ಮಾಡುತ್ತದೆ.ಎಂದೂ ಓಡದ ಮುಳ್ಳು ಆಗ ಜೋರಾಗಿ ಓಡುತ್ತದೆ.

ಮನೆಯೆಂದರೆ ಎಲ್ಲರಿಗೂ ಹಾಗೆ,ಪ್ರತೀ ಯುಗಾದಿಗೂ ಪ್ರತೀ ದೀಪಾವಳಿಗೂ, ಸಣ್ಣ ಸಣ್ಣ ಹಬ್ಬ ಹುಣ್ಣಿಮೆಗಳನ್ನು ಮನೆಯಲ್ಲಿಯೇ ಆಚರಿಸಬೇಕೆಂದೆನಿಸುತ್ತದೆ..ಹೇಗಿದ್ದರೂ ನಮ್ಮ ಊರು, ನಮ್ಮ ಮನೆ ನಮಗೆ ಚಂದವಲ್ಲವೇ?ಅದೆಷ್ಟು ಸುಂದರ ,ಅದ್ಭುತ ಎಂದೆನಿಸುತ್ತದೆ.. ಎಲ್ಲೇ ಹೋದರೂ ನಮ್ಮ ಊರಿನ ಕಡೆಯವರು ಸಿಕ್ಕರೆ ಸಾಕು. ಮುಖ ಅರಳಿಸಿ ಮಾತನಾಡಿಸಲೇಬೇಕೆಂದೆನಿಸುತ್ತದೆ..ನಮ್ ಊರಿನ ಬಸ್ ಹೆಸರು ನೋಡಿದ್ರು ಅದೆಷ್ಟು ಖುಷಿಯಾಗುತ್ತದೆ. ..ಆದರೂ ಪ್ರತೀ ಸಾರಿ ಮನೆಗೆ ಹೋದಾಗಲೂ ನನ್ನೂರಿನಲ್ಲಿ ಅದೆಷ್ಟು ಬದಲಾವಣೆಯಾಗಿರುತ್ತದೆ.. ನಾಲ್ಕಾಣೆಯ ಚಾಕಲೇಟ್ ಗಳೆಲ್ಲಾ ಬಂದಾಗಿರುತ್ತದೆ. ಐಸ್ಕ್ ಕ್ಯಾಂಡಿ ಮಾರುವವನ ಸದ್ದೇ ಇಲ್ಲ. ನಮ್ಮ ಬಾಲ್ಯದ ಸ್ನೇಹಿತರೆಲ್ಲಾ ಅವರವರ ಕೆಲಸದಲ್ಲಿ ಬ್ಯೂಸಿ. ಅಮ್ಮನ ಅಡುಗೆಗೆ ಬೈಯ್ಯುತ್ತಿದ್ದ ದಿನಗಳೆಲ್ಲಾ ಮರೆತು ಹೋಗಿ, ದಿನವೂ ಅವಳ ಅಡುಗೆಯೇ ತಿನ್ನಬೇಕೆಂದೆನಿಸುತ್ತದೆ.ಅದೇನೋ ಗೊತ್ತಿಲ್ಲ.ದೂರ ಇರುವಾಗಲೇ ಅದರ ಬೆಲೆ ಗೊತ್ತಾಗುತ್ತದೆ.ಎಂದು ಹೇಳುವ ಮಾತು ಎಷ್ಟು ಸತ್ಯ ಅಲ್ವಾ?

4 comments:

 1. ಲೇಖನ ಚೆನ್ನಾಗಿದೆ...
  ನನ್ನ ಬಾಲ್ಯಗಳನ್ನು ನೆನಪಿಸಿತು...

  ನೆನಪುಗಳ ಮಾತು ಮಧುರ..

  ನೆನಪುಗಳು ಯಾವಾಗಲೂ ಸೊಗಸು..

  ಇನ್ನಷ್ಟು ಬರೆಯಿರಿ... ಜೈ ಹೋ !!

  ReplyDelete
 2. ಲೇಖನ ಚೆನ್ನಾಗಿದೆ.ಮುಂದೆಯೂ ಒಳ್ಳೆಯ ಲೇಖನಗಳ ಉಡುಗೊರೆ ಬ್ಲಾಗ್ ಗೆಳೆಯರಿಗೆ ಸಿಗಲಿ .ನಿಮ್ಮ ಬ್ಲಾಗ್ ಯಶಸ್ವಿಯಾಗಲಿ.

  ReplyDelete
 3. ತುಂಬಾ ಚೆನ್ನಾಗಿದೆ ಕಣ್ರಿ..ಮನೆಯೆಂದರೆ ಮನ ಕುನಿಯುವುದು ಅದು ಹೇಗಿದ್ದರೂ ನಮಗೆ ಅರಮನೆ ಅಲ್ವಾ?

  ReplyDelete
 4. ಪದ್ಮಾ, ಚೆನ್ನಾಗಿದೆ. ಇದರಲ್ಲಿ ಪ್ರಸ್ತಾಪವಾದ ಒಂದೊಂದು ‘ಎಳೆ’ಯನ್ನೂ ಇನ್ನಷ್ಟು ವಿಸ್ತರಿಸಬಹುದು (ಟಿವಿ ಧಾರಾವಾಹಿಗಳಂತೆ ಅಲ್ಲ! :-) ಅಂದರೆ, ಒಂದೊಂದು ’ಹೊಳಹು’ ಸಹ ಜಸ್ಟ್ ಫ್ಲಾಷ್ ಆಗಿ ಹೋಗಿದೆ ಎನಿಸುತ್ತದೆ, ಅದನ್ನು ಇನ್ನೂ ಸ್ವಲ್ಪ ಉದಾಹರಣೆಗಳೊಂದಿಗೆ,anecdoteಗಳೊಂದಿಗೆ ವಿಸ್ತರಿಸಬಹುದು. ಆಗ ಪೂರ್ಣಪ್ರಮಾಣದ ಲಲಿತಪ್ರಬಂಧ (ಪದ್ಮಪ್ರಬಂಧ???) ಆಗುತ್ತದೆ. ಬರವಣಿಗೆಯ ಕುಸುರಿಕಲೆ ಹೀಗೆಯೇ ಮುಂದುವರೆಯಲಿ. ಶುಭಾಶಯಗಳು.

  ReplyDelete